ಮಾಡೆಲ್ ಕಿಮ್ ಕರ್ದಾಶಿಯಾ ವಿಚಿತ್ರ ಉಡುಪು ನೋಡಿ ಬೆಚ್ಚಿಬಿದ್ದ ಅಭಿಮಾನಿಗಳು ..!

ಮಾಡೆಲ್  ಕಿಮ್ ಕರ್ದಾಶಿಯಾ ವಿಚಿತ್ರ ಉಡುಪು ನೋಡಿ ಬೆಚ್ಚಿಬಿದ್ದ ಅಭಿಮಾನಿಗಳು ..!

ಯುಎಸ್ ಮಾಡೆಲ್ ​ಕಿಮ್ ಕರ್ದಾಶಿಯಾ ಮತ್ತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ. ಅನೇಕ ಕಾರಣಕ್ಕೆ ಆಗಾಗ ಸುದ್ದಿಯಾಗುತ್ತಲೇ ಇರುತ್ತಾಳೆ ಈ ಬೆಡಗಿ. ಆದರೆ, ಈ ಬಾರಿ ವಿಭಿನ್ನವಾಗಿ ಉಡುಗೆ ತೊಟ್ಟು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಮೆಟ್​ಗಾಲಾ ಇದೊಂದು ಸೆಲೆಬ್ರಿಟಿಗಳ ಫ್ಯಾಷನ್ ಹಬ್ಬ. ನ್ಯೂಯಾರ್ಕ್​ನಲ್ಲಿ ಪ್ರತಿ ವರ್ಷ ನಡೆಯುತ್ತದೆ. ಈ ಸಮಾರಂಭದಲ್ಲಿ ಜಗತ್ತಿನ ಹಲವು ಖ್ಯಾತ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ. ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ವಿಶ್ವದ ಗಮನ ಸೆಳೆಯುತ್ತಾರೆ. ಸೆಲೆಬ್ರಿಟಿಗಳು ಧರಿಸುವ ಉಡುಗೆಯೇ ಈ ಸಂಭ್ರದ ಹೈಲೆಟ್ ಅಂದರೆ ತಪ್ಪಾಗಲ್ಲ. ಚಿತ್ರ ವಿಚಿತ್ರ ಉಡುಗೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸುತ್ತಾರೆ. ಈ ಬಾರಿ ಕೂಡ ಮೆಟ್ ಗಾಲಾ ಅದ್ಧೂರಿಯಾಗಿಯೇ ಆಯೋಜನೆಗೊಂಡಿದ್ದು, ಅನೇಕ ಸೆಲೆಬ್ರಿಟಿಗಳು ವಿಭಿನ್ನ ಉಡುಗೆಗಳಲ್ಲಿ ಮಿಂಚಿದ್ದಾರೆ.

ಟೆಲಿವಿಶನ್ ತಾರೆ ​ಕಿಮ್ ಕರ್ದಾಶಿಯಾ ವಿಚಿತ್ರವಾದ ಉಡುಪುಗಳನ್ನು ಧರಿಸುವುದು ಹೊಸತಲ್ಲ. ಇತ್ತೀಚೆಗಷ್ಟೇ ರಿಯಾಲಿಟಿ ಸ್ಟಾರ್ ನ್ಯೂಯಾರ್ಕ್​ನಲ್ಲಿ ಚರ್ಮದ ಸೂಟ್ ಹಾಕಿಕೊಂಡು ತನ್ನ ಮುಖಕ್ಕೆ ಚರ್ಮದ ಮುಖವಾಡ ಧರಿಸಿ, ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದ್ದಾರೆ. ಕಿಮ್ ನ್ಯೂಯಾರ್ಕ್​ಗೆ ತಾಯಿ ಕ್ರಿಸ್ ಜೆನ್ನರ್, ಸಹೋದರಿ ಕೌರ್ಟ್ನಿ ಕಾರ್ದಾಶಿಯಾನ್, ಟ್ರಾವಿಸ್ ಬಾರ್ಕರ್ ಮತ್ತು ಕೋರೆ ಗ್ಯಾಂಬಲ್ ಜೊತೆ ಮೆಟ್ ಗಾಲಾಗೆ ಬಂದಿದ್ದರು. ಕಿಮ್‌ನಿಂದ ದೂರವಾಗಿರುವ ಪತಿ ಕಾನ್ಯೆ ವೆಸ್ಟ್ ಒಂದೆರಡು ವರ್ಷಗಳ ಹಿಂದೆ ಇದೇ ರೀತಿಯ ಬಟ್ಟೆಯನ್ನು ಧರಿಸುವ ಮೂಲಕ ಸುದ್ದಿ ಮಾಡಿದ್ದರು.

ಕಾಲಿನಿಂದ ನೆತ್ತಿಯವರೆಗೆ ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಸಂಪೂರ್ಣ ದೇಹವನ್ನು ಮುಚ್ಚಿಕೊಂಡು ಕಿಮ್ ಕರ್ದಾಶಿಯಾ ​ಕ್ಯಾಮರಾ ಮುಂದೆ ಬಂದಿದ್ದಾರೆ. ಕಿಮ್ ಅವರ ಈ ವಿಚಿತ್ರ ವೇಷದ ಫೋಟೋ ಈಗ ಸೋಶಿಯಲ್​ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಯ ಡೈಲಿ ಮೇಕಪ್ ರೂಟೀನ್ ವಿಡಿಯೋಗಳು ಹಾಗೂ ಚಿನ್ನದ ಬಳೆಗಳನ್ನು ತೋರಿಸುವ ವಿಡಿಯೋ ಹೆಚ್ಚು ಜನರನ್ನು ಸೆಳೆದಿತ್ತು. ಅಷ್ಟೇ ಅಲ್ಲ ಇತ್ತೀಚಿಗಷ್ಟೆ ಕಿಮ್, 'ಓಂ' ಆಕಾರದ ಓಲೆ ಧರಿಸಿ ಫೋಟೋಶೂಟ್ ಮಾಡಿಸುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಕಿಮ್ ಫೋಟೋಗೆ ಭಾರತೀಯರು ಭಾರಿ ವಿರೋಧ ವ್ಯಕ್ತಪಡಿಸಿದ್ದರು.

Related Stories

No stories found.
TV 5 Kannada
tv5kannada.com