ಕಿಮ್ ಜಾಂಗ್ ಉನ್ ತದ್ರೂಪಿ ಇವನು..!

ಕಿಮ್ ಜಾಂಗ್ ಉನ್ ತದ್ರೂಪಿ ಇವನು..!

ಉತ್ತರ ಕೊರಿಯಾದ ಸರ್ವೋಚ್ಚ ನಾಯಕ ಕಿಮ್-ಜಾಂಗ್ ಉನ್ ಅಂದರೆ ವಿರೋಧಿಗಳು ಮಾತ್ರವಲ್ಲ, ಆ ದೇಶದ ನಾಗರಿಕರೇ ಒಂದು ಕ್ಷಣ ಬೆಚ್ಚಿಬೀಳುತ್ತಾರೆ.

ಆತನೊಬ್ಬ ಹುಚ್ಚು ಸರ್ವಾಧಿಕಾರಿ. ಈ ಹಿಂದೆ ಕಿಮ್-ಜಾಂಗ್ ಉನ್ ಸಂಪುಟದ ಸದಸ್ಯನೊಬ್ಬ ತನ್ನಂತೆ ಹೇರ್ ಕಟ್ ಮಾಡಿಸಿದ್ದ ಎನ್ನುವ ಕಾರಣಕ್ಕೆ ಆತನನ್ನ ಹತ್ಯೆ ಮಾಡಿಸಿದ್ದ. ಇಷ್ಟೆಲ್ಲಾ ಇತಿಹಾಸವಿರುವ ಕಿಮ್-ಜಾಂಗ್ ಉನ್ ಬಗ್ಗೆ ಹಾಸ್ಯ ಮಾಡೋದು ಅಂದರೆ ಅಷ್ಟು ಸುಲಭದ ಮಾತಲ್ಲ.

ಉತ್ತರ ಕೊರಿಯಾ ಪ್ರಜೆಯಾದ ಅಮನ್ ಎಂಬಾತ ಕಿಮ್-ಜಾಂಗ್ ಉನ್ ರೀತಿಯೇ ಹೇರ್ ಸ್ಟೈಲ್​ ಮಾಡಿಸಿಕೊಂಡು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋದಲ್ಲಿ ಅಮನ್,​ ಕಿಮ್-ಜಾಂಗ್ ಉನ್ ತದ್ರೂಪಿಯಂತೆ ಕಾಣುತ್ತಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್​ ಆಗಿದೆ.

Related Stories

No stories found.
TV 5 Kannada
tv5kannada.com