Tuesday, August 16, 2022

ಗಡಿ ನಿರ್ಬಂಧ ಮೀರಿದ ವಿವಾಹ ಬಂಧ..!

Must read

ಈ ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪ್ರಯಾಣಿಸಲು ಸಾಕಷ್ಟು ನಿಯಮಗಳಿವೆ. ನಮ್ಮವರ ಮನೆಗಳಿಗೂ ಹೋಗಲಾಗದೆ, ಸಮಾರಂಭಗಳಲ್ಲೂ ಭಾಗವಹಿಸಲಾಗದಂತಹ ಪರಿಸ್ಥಿತಿ ಎದುರಾಗಿತ್ತು.

ಆದರೆ, ಇದೆಲ್ಲದರ ನಡುವೆ ಇಲ್ಲೊಂದು ಜೋಡಿ ಗಡಿ ನಿರ್ಬಂಧದ ಹೊರತಾಗಿಯೂ ವಿಭಿನ್ನ ರೀತಿಯಲ್ಲಿ ಮದುವೆಯಾಗಿದೆ. ಮೂಲತಃ ಕೆನಡಾ ಮೂಲದ ವಧು ಕರೆನ್ ಮಹೋನಿ ಅಮೆರಿಕಾದ ನ್ಯೂಯಾರ್ಕ್ ನಲ್ಲಿ ವಾಸವಿದ್ದಾಳೆ. ಇವರು ತನ್ನ ಬಾಲ್ಯದ ಗೆಳೆಯ ಅಮೆರಿಕಾದ ಬ್ರಿಯಾನ್ ರೇ ಜೊತೆ ಮದುವೆಯಾಗಲು ಸಿದ್ಧಳಾಗಿದ್ದಳು. ಆದರೆ, ಕೊರೊನಾ ಕಾರಣದಿಂದ ಯುಎಸ್-ಕೆನಡಾದ ಗಡಿ ಭಾಗವನ್ನು ಮುಚ್ಚಲಾಗಿರುವುದರಿಂದ, ತನ್ನ ಕುಟುಂಬ ಹೇಗೆ ಮದುವೆಯಲ್ಲಿ ಪಾಲ್ಗೊಳ್ಳುತ್ತಾರೋ ಎಂಬ ಚಿಂತೆ ಅವಳದ್ದಾಗಿತ್ತು.

ಮದುವೆಯ ದಿನಾಂಕವು ಸಮೀಪಿಸುತ್ತಿತ್ತು. ಅಷ್ಟರಲ್ಲಾಗಲೇ ವಧು ತಲೆಗೊಂದು ಐಡಿಯಾ ಹೊಳೆದಿದೆ. ಯುಎಸ್-ಕೆನಡಾ ಗಡಿ ಬಳಿಯೇ ಇವರು ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ವಧುವಿನ ಪೋಷಕರು ಕೂಡ ಮದುವೆಯಲ್ಲಿ ಖುಷಿಯಿಂದಲೇ ಭಾಗವಹಿಸಿದ್ದಾರೆ. ಗಡಿಯಾಚೆ ಪೋಷಕರು ನಿಂತಿದ್ದರೆ, ಈಚೆಗೆ ವಧು-ವರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ, ಎರಡೂ ಕುಟುಂಬಗಳು ಖುಷಿಯಿಂದಲೇ ಮದುವೆಯ ಸಂಭ್ರವನ್ನಾಚರಿಸಿವೆ. ವಧುವಿನ 96 ವರ್ಷದ ಅಜ್ಜಿ-ತಾತ ಈ ವಿವಾಹದಲ್ಲಿ ಪಾಲ್ಗೊಂಡು, ಕೆನಡಾ ಗಡಿಯಿಂದಲೇ ನೂತನ ದಂಪತಿಗೆ ಶುಭ ಹಾರೈಸಿದ್ದಾರೆ.

 

Latest article