61ರ ವೃದ್ಧೆಯನ್ನು ಕೈಹಿಡಿದ 24ರ ಯುವಕ..!

61ರ ವೃದ್ಧೆಯನ್ನು ಕೈಹಿಡಿದ 24ರ ಯುವಕ..!

ಪ್ರೀತಿಗೆ ವಯಸ್ಸು ಅಡ್ಡಿಯಾಗದು ಎಂಬ ಮಾತಿದೆ. ಅದರಂತೆ 61 ವೃದ್ಧೆಯೊಬ್ಬರು 24 ವರ್ಷದ ಯುವಕನ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ.

ಅಮೆರಿಕದ 24 ವರ್ಷದ ಖರನ್​ ಮೆಕೇನ್​ ಹಾಗೂ 61 ವರ್ಷದ ಚೆರಿಲ್​ ಮೆಕ್​​ಗ್ರೆಗರ್​​ ಸೆಪ್ಟೆಂಬರ್​ 3ರಂದು ವಿವಾಹವಾಗಿದ್ದಾರೆ. ನಮ್ಮ ಫೋಟೋ ನೋಡಿದ ನೆಟ್ಟಿಗರು ಅಜ್ಜಿ-ಮೊಮ್ಮಗ ಎಂದು ಜರಿದರೂ ಸಹ ನಮ್ಮ ಪ್ರೀತಿ ಅಗಾಧವಾಗಿದೆ ಎಂದು ಈ ದಂಪತಿ ಹೇಳಿದ್ದಾರೆ.

ಟಿಕ್​ಟಾಕ್​ ಖಾತೆಯಲ್ಲಿ ಈ ದಂಪತಿ ತಮ್ಮ ಮದುವೆ ಲೈವ್​ ವಿಡಿಯೋ ಪ್ರಸಾರ ಮಾಡಿತ್ತು. 61 ವರ್ಷ ವಯಸ್ಸಿನ ಮಧುಮಗಳು ಶ್ವೇತ ವರ್ಣದ ದಿರಿಸಿನಲ್ಲಿದ್ದರೆ, ಖರನ್​ ಕಂದು ಬಣ್ಣದ ಸೂಟ್​ ಧರಿಸಿದ್ದರು. ಮದುವೆಯ ದಿನ ನಾವು ಟಿಕ್​ಟಾಕ್​ನಲ್ಲಿ ಲೈವ್​ ಬಂದಿದ್ದೆವು. ನಮ್ಮ ಮದುವೆ ಟೆನ್ನೆಸಿಯಲ್ಲಿ ನಡೆದಿತ್ತು ಎಂದು ಖರನ್​ ಹೇಳಿದ್ದಾರೆ.

ಇವರ ಲವ್ ಸ್ಟೋರಿ ಸಿಕ್ಕಾಪಟ್ಟೆ ಕುತೂಹಲಕಾರಿಯಾಗಿದೆ. ಖರನ್​ ಕೇವಲ 15 ವರ್ಷ ಪ್ರಾಯದವನಾಗಿದ್ದಾಗ ಈ ಜೋಡಿ 2012ರಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗಿದ್ದರು. ಚೆರಿಲ್ ಪುತ್ರ ನಡೆಸುವ ಫಾಸ್ಟ್​ ಫುಡ್​ ರೆಸ್ಟೋರೆಂಟ್​ನಲ್ಲಿ ಇವರು ಜೊತೆಯಾಗಿ ಕೆಲಸ ಮಾಡುತ್ತಿದ್ದರು. ಬಹಳ ವರ್ಷಗಳ ಕಾಲ ಇವರ ನಡುವೆ ಸಂಪರ್ಕ ಕಡಿತವಾಗಿತ್ತು. ಬಳಿಕ ಇವರು ಕಳೆದ ವರ್ಷ ನವೆಂಬರ್ 4ರಂದು ಮತ್ತೆ ಒಬ್ಬರನ್ನೊಬ್ಬರು ಭೇಟಿಯಾದರು. ಜುಲೈ 31ರಂದು ಖರನ್​ ಉಂಗುರವನ್ನು ನೀಡುವ ಮೂಲಕ ಪ್ರೇಮ ನಿವೇದನೆ ಮಾಡಿದ್ದ.

ಚೆರಿಲ್​ರನ್ನು ವಿವಾಹವಾಗಲು ನನ್ನ ಬಳಿ ಹಲವು ಕಾರಣಗಳಿದ್ದವು. ಆಕೆ ಸುಂದರಿ, ಪ್ರಾಮಾಣಿಕ ಹಾಗೂ ಸಹಾನುಭೂತಿಯುಳ್ಳ ಮಹಿಳೆ ಆಗಿದ್ದಾರೆ. ನಾನು ಪ್ರೇಮ ನಿವೇದನೆ ಮಾಡಿದಾಗ ಚೆರಿಲ್​ಗೆ ನಂಬಲು ಸಾಧ್ಯವಾಗಿರಲಿಲ್ಲ. ನನಗೆ ಇದು ಮೊದಲ ಮದುವೆಯಾಗಿದೆ. ಆದರೆ, ಚೆರಿಲ್​ ಈ ಹಿಂದೆ ಕೂಡ ಮದುವೆಯಾಗಿದ್ದರು ಎಂದು ಹೇಳಿದ್ದಾನೆ.

ಚೆರಿಲ್​ರ ಏಳು ಮಕ್ಕಳಲ್ಲಿ ಮೂವರು ಈ ಸಂಬಂಧಕ್ಕೆ ಒಪ್ಪಿಗೆ ನೀಡಿದ್ದಾರೆ. ಖರನ್​ ಕುಟುಂಬಸ್ಥರಿಗೆ ಈ ಮದುವೆ ಒಪ್ಪಿಗೆ ಇದೆ ಎನ್ನಲಾಗಿದೆ. ಇದೆಲ್ಲದರ ನಡುವೆ ಈ ದಂಪತಿ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಅನೇಕರು ಒಳ್ಳೆಯ ಹೇಳಿಕೆಗಳನ್ನೇ ನೀಡಿದರೆ, ಇನ್ನು ಕೆಲವರು ಖರನ್,​ ಚೆರಿಲ್​ರ ಹಣ ದುರ್ಬಳಕೆ ಮಾಡಲು ಪ್ಲಾನ್​ ಮಾಡಿದ್ದಾನೆ ಎಂಬ ಮಾತನ್ನು ಹೇಳಿದ್ದಾರೆ.

Related Stories

No stories found.
TV 5 Kannada
tv5kannada.com