Wednesday, May 18, 2022

ಪುದುಚೇರಿ ಲೆಫ್ಟಿನೆಂಟ್ ಗವರ್ನರ್​ ಆಗಿ ಡಾ.ತಮಿಳಿಸೈ ಸೌಂದರರಾಜನ್ ಅಧಿಕಾರ ಸ್ವೀಕಾರ

Must read

ಪುದುಚೇರಿ: ತೆಲಂಗಾಣ ರಾಜ್ಯದ ರಾಜ್ಯಪಾಲೆ ಡಾ.ತಮಿಳಿಸೈ ಸೌಂದರರಾಜನ್ ಅವರು ಇಂದು (ಗುರುವಾರ) ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಹೆಚ್ಚುವರಿ ಜವಾಬ್ದಾರಿಯಾಗಿ ಅಧಿಕಾರ ಸ್ವೀಕಾರಿಸಿದ್ದಾರೆ.

ಇದೇ ತಿಂಗಳ 16ರಂದು ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಸ್ಥಾನದಿಂದ ಡಾ. ಕಿರಣ್ ಬೇಡಿ ಅವರನ್ನು ಪದಚ್ಯುತಿಗೊಳಿಸಿ ಆದೇಶ ಹೊರಡಿಸಲಾಗಿತ್ತು. ನಂತರ ತಮಿಳಿಸೈ ಸೌಂದರರಾಜನ್ ಅವರು ಪುದುಚೇರಿಯ ಹೆಚ್ಚುವರಿ ಜವಾಬ್ದಾರಿ ವಹಿಸುವಂತೆ ರಾಷ್ಟ್ರಪತಿ ಭವನ ಸೂಚನೆ ನೀಡಿತ್ತು.

ಅಲ್ಲಿನ ರಾಜ ನಿವಾಸದಲ್ಲಿ ಗುರುವಾರ ಬೆಳಗ್ಗೆ ನಡೆದ ಸಮಾರಂಭದಲ್ಲಿ ತಮಿಳಿಸೈ ಸೌಂದರರಾಜನ್ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಈ ವೇಳೆ ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಸೇರಿದಂತೆ ಉಪಸ್ಥಿತರಿದ್ದರು.

Latest article