Thursday, May 19, 2022

ಕಾಬೂಲ್​​ನಲ್ಲಿ ಹಸಿವಿನಿಂದ ಬಳಲುತ್ತಿದ್ದ ಮಕ್ಕಳಿಗೆ ಆಹಾರ ನೀಡಿದ ಅಮೆರಿಕಾ ಸೈನಿಕರು

Must read

ಅಫ್ಘಾನ್‌ನಲ್ಲಿ ಉಗ್ರರ ಉಪಟಳ ಮುಂದುವರೆದಿದ್ದು, ಇಡೀ ಅಘ್ಘಾನ್​ನನ್ನು ತಾಲಿಬಾನ್​ ಉಗ್ರರು ತಮ್ಮ ಕೈವಶ ಮಾಡಿಕೊಂಡಿದ್ದಾರೆ. ಇನ್ನು ಕಾಬೂಲ್​ ಏರ್​ಪೋರ್ಟ್​​ನಲ್ಲಿ ಅಘ್ಘಾನ್​ ಪುರುಷರು ಮಹಿಳೆಯ ಮಕ್ಕಳು ದೇಶವನ್ನು ತೊರೆಯಲು ಹರಸಾಹಸ ಪಡುತ್ತಿದ್ದಾರೆ. ಈ ವೇಳೆ ಹಸಿವಿನಿಂದ ಬಳಲುತ್ತಿದ್ದ ಮಕ್ಕಳಿಗೆ ಅಮೆರಿಕಾ ಸೈನಿಕರು ಆಹಾರವನ್ನು ವಿತರಿಸಿದ್ದಾರೆ.

ಇನ್ನು ಕಾಬೂಲ್​ ಏರ್​​ಪೋರ್ಟ್​​ನಲ್ಲಿರುವ ,ಮಹಿಳೆಯರು ಮತ್ತು ಮಕ್ಕಳಿಗೆ ಅಮೆರಿಕಾ ಸೇನಾ ಪಡೆಯಿಂದ ಆಹಾರ ವಿತರಣೆಯನ್ನು ಮಾಡಲಾಗುತ್ತಿದೆ. ಚಿಪ್ಸ್, ಬಿಸ್ಕೆಟ್ ಸೇರಿದಂತೆ ಇತರೆ ಫುಡ್ ವಿತರಣೆಯನ್ನು ಮಾಡಲಾಗುತ್ತಿದೆ. ಇನ್ನು ಹಸಿವಿನಿಂದ ಕಂಗೆಟ್ಟಿರುವ ಮಕ್ಕಳು ಆಹಾರಕ್ಕೆ ಮುಗಿಬಿದ್ದಿದ್ದು, ಕರಳು ಹಿಂಡುವಂತಿದೆ.

ತಾಲಿಬಾನ್ ಹಿಡಿತದಲ್ಲಿರುವ ಅಘ್ಘಾನ್​ನಲ್ಲಿ ಆಹಾರ ಕೊರತೆ ಉಂಟಾಗಿದೆ. ಕಳೆದ ಎರಡು ವರ್ಷಗಳಿಂದ ಅಘ್ಘಾನ್​ ಭೀಕರ ಬರಗಾಲಕ್ಕೆ ನಲುಗಿ ಹೋಗಿತ್ತು. ಇನ್ನು ಚೇರಿಸಿಕೊಳ್ಳುವ ಹೊತ್ತಿನಲ್ಲಿ ಅಘ್ಘಾನ್​ ತಾಲಿಬಾನ್​ ವಶಕ್ಕೆ ಪಡೆದಿದೆ. ಇದರಿಂದ ಮುಂದಿನ ದಿನಗಳಲ್ಲಿ ಅಘ್ಘಾನ್​ನಲ್ಲಿ​ ಆಹಾರಕ್ಕೆ ಹಾಹಾಕಾರ ಉಂಟಾಗಲಿದೆ. ಈ ಬಗ್ಗೆ ಕೂಡ ವಿಶ್ವಸಂಸ್ಥೆ ಕೂಡ ಕಳವಳ ವ್ಯಕ್ತ ಪಡಿಸಿದ್ದು. ಈಗಾಗಲೇ ಅಫ್ಘಾನ್ ಬರಗಾಲದಿಂದ ನಲುಗಿದೆ. ಮತ್ತುಷ್ಟು ಭೀಕರ ಬರಗಾಲ ಏದುರಿಸುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ಕೂಡ ಕಳವಳ ವ್ಯಕ್ತಪಡಿಸಿದೆ.

Latest article