ಅಫ್ಘಾನ್ನಲ್ಲಿ ಉಗ್ರರ ಉಪಟಳ ಮುಂದುವರೆದಿದ್ದು, ಇಡೀ ಅಘ್ಘಾನ್ನನ್ನು ತಾಲಿಬಾನ್ ಉಗ್ರರು ತಮ್ಮ ಕೈವಶ ಮಾಡಿಕೊಂಡಿದ್ದಾರೆ. ಇನ್ನು ಕಾಬೂಲ್ ಏರ್ಪೋರ್ಟ್ನಲ್ಲಿ ಅಘ್ಘಾನ್ ಪುರುಷರು ಮಹಿಳೆಯ ಮಕ್ಕಳು ದೇಶವನ್ನು ತೊರೆಯಲು ಹರಸಾಹಸ ಪಡುತ್ತಿದ್ದಾರೆ. ಈ ವೇಳೆ ಹಸಿವಿನಿಂದ ಬಳಲುತ್ತಿದ್ದ ಮಕ್ಕಳಿಗೆ ಅಮೆರಿಕಾ ಸೈನಿಕರು ಆಹಾರವನ್ನು ವಿತರಿಸಿದ್ದಾರೆ.
ಇನ್ನು ಕಾಬೂಲ್ ಏರ್ಪೋರ್ಟ್ನಲ್ಲಿರುವ ,ಮಹಿಳೆಯರು ಮತ್ತು ಮಕ್ಕಳಿಗೆ ಅಮೆರಿಕಾ ಸೇನಾ ಪಡೆಯಿಂದ ಆಹಾರ ವಿತರಣೆಯನ್ನು ಮಾಡಲಾಗುತ್ತಿದೆ. ಚಿಪ್ಸ್, ಬಿಸ್ಕೆಟ್ ಸೇರಿದಂತೆ ಇತರೆ ಫುಡ್ ವಿತರಣೆಯನ್ನು ಮಾಡಲಾಗುತ್ತಿದೆ. ಇನ್ನು ಹಸಿವಿನಿಂದ ಕಂಗೆಟ್ಟಿರುವ ಮಕ್ಕಳು ಆಹಾರಕ್ಕೆ ಮುಗಿಬಿದ್ದಿದ್ದು, ಕರಳು ಹಿಂಡುವಂತಿದೆ.
ತಾಲಿಬಾನ್ ಹಿಡಿತದಲ್ಲಿರುವ ಅಘ್ಘಾನ್ನಲ್ಲಿ ಆಹಾರ ಕೊರತೆ ಉಂಟಾಗಿದೆ. ಕಳೆದ ಎರಡು ವರ್ಷಗಳಿಂದ ಅಘ್ಘಾನ್ ಭೀಕರ ಬರಗಾಲಕ್ಕೆ ನಲುಗಿ ಹೋಗಿತ್ತು. ಇನ್ನು ಚೇರಿಸಿಕೊಳ್ಳುವ ಹೊತ್ತಿನಲ್ಲಿ ಅಘ್ಘಾನ್ ತಾಲಿಬಾನ್ ವಶಕ್ಕೆ ಪಡೆದಿದೆ. ಇದರಿಂದ ಮುಂದಿನ ದಿನಗಳಲ್ಲಿ ಅಘ್ಘಾನ್ನಲ್ಲಿ ಆಹಾರಕ್ಕೆ ಹಾಹಾಕಾರ ಉಂಟಾಗಲಿದೆ. ಈ ಬಗ್ಗೆ ಕೂಡ ವಿಶ್ವಸಂಸ್ಥೆ ಕೂಡ ಕಳವಳ ವ್ಯಕ್ತ ಪಡಿಸಿದ್ದು. ಈಗಾಗಲೇ ಅಫ್ಘಾನ್ ಬರಗಾಲದಿಂದ ನಲುಗಿದೆ. ಮತ್ತುಷ್ಟು ಭೀಕರ ಬರಗಾಲ ಏದುರಿಸುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ಕೂಡ ಕಳವಳ ವ್ಯಕ್ತಪಡಿಸಿದೆ.
Happening in #Afghanistan | Very impressive… The US Army distributes food and potato chips to #Afghan children #KabulAiport #kabul #USA#Taliban #Talibans #AfghanWomen #Afganistan #AfganistanWomen #Afghans #Kabul #KabulHasFallen #KabulFalls pic.twitter.com/VNuYS7KYbZ
— Shishir Choudhary (@shishir1986) August 21, 2021