Tuesday, August 16, 2022

ಈ ವರ್ಷ ಅತಿ ಹೆಚ್ಚು ಡೌನ್​ಲೋಡ್ ಕಂಡ ಆ್ಯಪ್​ ಟಿಕ್​ಟಾಕ್​

Must read

ದೇಶದ ಸಾರ್ವಭೌಮತೆ ಹಾಗೂ ಸಮಗ್ರತೆಗೆ ಧಕ್ಕೆ ತರುತ್ತಿವೆ ಎನ್ನುವ ಕಾರಣ ನೀಡಿ ಚೀನಾದ 59 ಮೊಬೈಲ್ ಅಪ್ಲಿಕೇಷನ್‌ಗಳ ಮೇಲೆ ಭಾರತ ಸರ್ಕಾರ ನಿಷೇಧ ಹೇರಿತ್ತು. ಇದೀಗ ಸೆನ್ಸರ್ ಟವರ್ ಈ ವರ್ಷದ ವರದಿಯನ್ನು ಸಲ್ಲಿಸಿದ್ದು, ಅದರಲ್ಲಿ ಅಧಿಕ ಡೌನ್​​​​​​​​ಲೋಡ್ ಕಂಡ ಮತ್ತು ಹೆಚ್ಚು ಸಂಪಾದಿಸಿದ ಆ್ಯಪ್​ಗಳ ಪಟ್ಟಿಯನ್ನು ತೆರೆದಿಟ್ಟಿದೆ.

ವರದಿಯಲ್ಲಿ ಉಲ್ಲೇಖಿಸಿರುವಂತೆ, ಟಿಕ್‌ಟಾಕ್, ಪಬ್​ ಜಿ ಆ್ಯಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್ ಎರಡರಲ್ಲೂ 2021ರ ಮೂರನೇ ತ್ರೈಮಾಸಿಕದಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ಆ್ಯಪ್​ಗಳಾಗಿ ಗುರುತಿಸಿದೆ. ಟಿಕ್‌ಟಾಕ್ ವಿಶ್ವಾದ್ಯಂತ ಅಗ್ರ-ಗಳಿಕೆಯ ಆ್ಯಪ್ ಆಗಿದ್ದರೆ, PUBG ವಿಶ್ವಾದ್ಯಂತ ಗೇಮಿಂಗ್ ವಿಭಾಗದಲ್ಲಿ ಹೆಚ್ಚಿನ ಜನಮನ್ನನಣೆ ಪಡೆದ ಆ್ಯಪ್ ಆಗಿದೆ. ವಿಶ್ವದಾದ್ಯಂತ ಈ ಆ್ಯಪ್​ಗಾಗಿ ಗ್ರಾಹಕರು ಹೆಚ್ಚು ಖರ್ಚು ಮಾಡುತ್ತಿದ್ದು, ವರ್ಷದಿಂದ ವರ್ಷಕ್ಕೆ ಶೇ. 41ರಷ್ಟು ಬೆಳವಣಿಗೆಯನ್ನು ಕಂಡಿದೆ ಎಂದು ವರದಿ ತಿಳಿಸಿದೆ.

ಸೆನ್ಸರ್ ಟವರ್‌ನ ಟಿಕ್‌ಟಾಕ್ ಆದಾಯದ ಅಂಕಿಅಂಶಗಳ ಪ್ರಕಾರ, ಚೀನಾದಲ್ಲಿ ಐಒಎಸ್‌ನಲ್ಲಿ ಡೌಯಿನ್ ಅನ್ನು ಒಳಗೊಂಡಿವೆ. ಇನ್ನು ಮೂರನೇ ತ್ರೈಮಾಸಿಕದಲ್ಲಿ, ಪಬ್​ ಜಿ ಮೊಬೈಲ್‌ನಲ್ಲಿ ಗ್ರಾಹಕರ ಖರ್ಚು 11% ರಷ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ಚೀನಾ ಮೂಲದ ಟಿಕ್‌ಟಾಕ್ ಅತಿ ಹೆಚ್ಚು ಗಳಿಕೆಯ ಅಪ್ಲಿಕೇಶನ್ ಆಗಿದೆ.

ಒಟ್ಟಾರೆಯಾಗಿ, ಮಂಗಾ ರೀಡರ್ ಪಿಕೋಮಾದ ಆದಾಯವು 130 ಪ್ರತಿಶತದಷ್ಟು ಹೆಚ್ಚಾಗಿದೆ. ನಂತರ ಯೂಟ್ಯೂಬ್​ಗಾಗಿ ಗ್ರಾಹಕರು ವ್ಯಯಿಸಿರುವ ಖರ್ಚು ಶೇಕಡಾ 17ರಷ್ಟು ಏರಿಕೆ ಕಂಡಿದೆ. ಗೂಗಲ್ ಒನ್ ಮತ್ತು ಡಿಸ್ನಿ+ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ಆ್ಯಪ್‌ಗಳಾಗಿದೆ. ಆ್ಯಪ್ ಸ್ಟೋರ್‌ನಲ್ಲಿ ಟಿಕ್‌ಟಾಕ್ ಅಗ್ರ-ಗಳಿಕೆಯ ಅಪ್ಲಿಕೇಶನ್ ಆಗಿದ್ದರೂ, ಗೂಗಲ್ ಒನ್ -ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದೆ.

ವಿಶ್ವದಾದ್ಯಂತ ಅತಿ ಹೆಚ್ಚು ಡೌನ್‌ಲೋಡ್ ಮಾಡಲಾದ ಅಪ್ಲಿಕೇಶನ್ ಟಿಕ್‌ಟಾಕ್, ನಂತರ ಇನ್​ಸ್ಟಾಗ್ರಾಮ್​, ಫೇಸ್​ಬುಕ್​, ವಾಟ್ಸಾಪ್ ಮತ್ತು ಫೇಸ್​ಬುಕ್​ ಮೇಸೆಂಜರ್​ ಎಂಬುದು ತಿಳಿದುಬಂದಿದೆ. ಟಿಕ್‌ಟಾಕ್ ಇತ್ತೀಚೆಗೆ ಜಾಗತಿಕವಾಗಿ 3 ಬಿಲಿಯನ್ ಇನ್‌ಸ್ಟಾಲ್‌ಗಳನ್ನು ದಾಟಿದೆ.

Also read:  ಇಂದು ಬಿಹಾರ ರಾಜ್ಯದ ಸಿಎಂ ಆಗಿ ನಿತೀಶ್​ ಕುಮಾರ್ ಪ್ರಮಾಣವಚನ

 

 

Latest article