ಕೋವಿಡ್ ಮೊದಲ ಅಲೆಗೆ ತತ್ತರಿಸಿದ ಅಮೇರಿಕಾ ಇದೀಗ ಶರವೇಗದ ಲಸಿಕೆ ಉತ್ಪಾದನೆಯಲ್ಲಿ ತೊಡಗಿದೆ. ಈ ವಾರಾಂತ್ಯಕ್ಕೆ 160 ಮಿಲಿಯನ್ ಅಮೆರಿಕನ್ನರಿಗೆ ಎರಡೂ ಡೋಸ್ ಲಸಿಕೆ ಪೂರೈಸುವ ಗುರಿ ಹೊಂದಲಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಜೋಬೈಡನ್ ತಿಳಿಸಿದ್ದಾರೆ.
ಕೋವಿಡ್ ನಿರ್ವಹಣಾ ತಂಡದಿಂದ ಮಾಹಿತಿ ಪಡೆದ ಬಳಿಕ ಮಾತನಾಡಿದ ಜೋ ಬೈಡನ್ 27 ವರ್ಷ ಮೇಲ್ಪಟ್ಟ ಶೇ.70 ಹಾಗೂ ಶೇ.90ರಷ್ಟು ಹಿರಿಯರಿಗೆ ಸೇರಿ ಒಟ್ಟು 182 ಮಿಲಿಯನ್ ಜನರಿಗೆ ಮೊದಲ ಡೋಸ್ ನೀಡಲಾಗಿದೆ.
150 ದಿನಗಳ ಅಂತರದಲ್ಲಿ 300 ಡೋಸ್ ಲಸಿಕೆ ತಯಾರಿ ಪೂರ್ಣಗೊಳಿಸಿರುವ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.
ಜನವರಿ ನಂತರದಲ್ಲಿ ಕೊವಿಡ್ ಪ್ರಕರಣಗಳು ಗಣನೀಯವಾಗಿ ಇಳಿಕೆ ಕಂಡ ಬೆನ್ನಲ್ಲೇ ಲಸಿಕೆಯ ಹಂಚಿಕೆಯಲ್ಲೂ ಕೂಡ ವೇಗ ಪಡೆದುಕೊಂಡು, 2 ಡೋಸ್ನಿಂದ ಯಾರೂ ವಂಚಿತರಾಗದಂತೆ ಲಸಿಕೆ ಹಂಚಿಕೆಯನ್ನು ಸಮರ್ಥವಾಗಿ ನಡೆಸುವಲ್ಲಿ ಗಮನ ಹರಿಸುತ್ತಿದೆ.