ಅಫ್ಘಾನಿಸ್ತಾನದಲ್ಲಿ ಉಗ್ರರ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ನಡುವೆ ದೇಶವನ್ನು ತೊರೆಯಲು ಅಘ್ಘಾನ್ ಪ್ರಜೆಗಳು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮುಗಿಬಿದ್ದಿದ್ದಾರೆ. ಜೊತೆಗೆ ಇಡೀ ಅಘ್ಘಾನ್ ವಶಪಡಿಸಿಕೊಂಡಿರುವ ಉಗ್ರರು ಕಾಬೂಲ್ ಏರ್ಪೋರ್ಟ್ ವಶಪಡಿಸಿಕೊಳ್ಳಲು ಇದೀಗ ಮುಂದಾಗಿದೆ. ಆದರೆ ಕಾಬೂಲ್ ವಿಮಾನ ನಿಲ್ದಾಣ ಮಾತ್ರ ಅಮೆರಿಕ ಸೇನೆಯ ಹಿಡಿದಲ್ಲಿದೆ. ಇದಕ್ಕಾಗಿ ತಾಲಿಬಾನ್ ಉಗ್ರರು ಆಗಸ್ಟ್ 31 ರವರೆಗೆ ಮಾತ್ರ ಕಾಬೂಲ್ ಏರ್ಪೋರ್ಟ್ನಲ್ಲಿ ಅಮೆರಿಕ ಸೇನೆ ಇರಬೇಕು ನಂತರ ಕಾಬೂಲ್ನಿಂದ ಹೊರಡಬೇಕೆಂದು ಗಡುವು ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ತಾಲಿಬಾನ್ ಸದಸ್ಯ ಸುಹೇಲ್ ಶಾಹೀನ್ ಅಘ್ಘಾನ್ನಿಂದ ಜನರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ವಿಸ್ತರಿಸಲು ತಾಲಿಬಾನ್ ಒಪ್ಪುವುದಿಲ್ಲ .ತಾಲಿಬಾನ್ ಮತ್ತೆ ಅಧಿಕಾರ ಹಿಡಿಯುತ್ತದೆ. ಆದರೆ ಅಮೆರಿಕ ಸೇನೆ ಅಘ್ಘಾನ್ನಲ್ಲಿ ಇದ್ದರೆ ನಮಗೆ ಅಧಿಕಾರ ಸ್ಥಾಪಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅಮೆರಿಕ ಸೇನೆ ಆಗಸ್ಟ್ 31ರ ವರೆಗೆ ಮಾತ್ರ ಅಮೆರಿಕದಲ್ಲಿ ಇರಬೇಕೆಂದು ತಾಲಿಬಾನ್ ಸದಸ್ಯ ಸುಹೇಲ್ ಶಾಹೀನ್ ಅಮೆರಿಕ ಸೇನೆಗೆ ಗಡುವು ನೀಡಿದ್ದಾನೆ.