ನಮ್ಮ ಬಾಹುಬಲಿ: ಜನಸೇವೆಗೆಂದೇ ಜನಿಸಿದ ಬೆಳಗಾವಿ ಯುವಕ.. ಜನರೇ ಇವರನ್ನ ಮಾಡಿದರು ಜನನಾಯಕ

ಇಂದಿನ ನಮ್ಮ ಬಾಹುಬಲಿ, ಶಂಕರ್ ವಿಲಾಸ್ ಪಾಟೀಲ್, ಕಾರ್ಪೊರೇಟರ್-ಸಮಾಜ ಸೇವಕ
ನಮ್ಮ ಬಾಹುಬಲಿ: ಜನಸೇವೆಗೆಂದೇ ಜನಿಸಿದ ಬೆಳಗಾವಿ ಯುವಕ.. ಜನರೇ ಇವರನ್ನ ಮಾಡಿದರು ಜನನಾಯಕ
Namma Bahubali Shankar Vilas Patil

ಹೆಸರು ಶಂಕರ್ ವಿಲಾಸ್​​ ಪಾಟೀಲ್​.. ಬಡ ಕುಟುಂಬದಲ್ಲಿ ಜನಿಸಿದ ಇವರು ರಾತ್ರಿ ಹೊತ್ತು ಅಪ್ಪನ ಆಟೋ ಓಡಿಸುತ್ತಿದ್ದರು.. ಅದರಿಂದ ಬಂದ ಹಣದಲ್ಲಿ ಶಿಕ್ಷಣ ಪಡೆದವರು.. ಹೀಗೆ ಪದವಿ ಮುಗಿಸಿರೋ ಶಂಕರ್​ ಪಾಟೀಲ್​, ಮೆಡಿಕಲ್​ ರೆಪ್ರೆಸೆಂಟೇಟಿವ್​ ಆಗಿ ಕೆಲಸ ಮಾಡ್ತಾ ಇದ್ರು.. ಜೊತೆಗೆ ಪ್ರಾಣಿಗಳ ರಕ್ಷಣೆ, ಅವುಗಳ ಪೋಷಣೆಯನ್ನ ತುಂಬಾ ಆಸಕ್ತಿಯಿಂದ ಮಾಡುತ್ತಿದ್ದರು.. ಬಿಡಾಡಿ ದನಗಳನ್ನ ಸಾಕುವುದು, ಅವುಗಳಿಗೆ ಹೆಚ್ಚು ಕಡಿಮೆಯಾದ್ರೆ ಚಿಕಿತ್ಸೆ ಕೊಡಿಸುವುದು ಹೀಗೆ ಸಾಮಾಜಿಕ ಕಾರ್ಯವೂ ಸಾಗಿತ್ತು.. ಕೋವಿಡ್​ ಸಂದರ್ಭದಲ್ಲಿ 30 ಜನರ ಒಂದು ತಂಡವನ್ನ ಕಟ್ಟಿಕೊಂಡು ಶಂಕರ್​, ಅನಾಥ ಶವಗಳ ಅಂತ್ಯಕ್ರಿಯೆ ಮಾಡಲು ಶುರು ಮಾಡ್ತಾರೆ.. ಬೆಳಗಾವಿ ಒಂದರಲ್ಲಿ 300ಕ್ಕೂ ಹೆಚ್ಚು ಅನಾಥ ಶವಗಳಿಗೆ ಆಯಾ ಧರ್ಮದ ವಿಧಿ ವಿಧಾನದ ಪ್ರಕಾರ ಅಂತ್ಯಕ್ರಿಯೆ ನೆರವೇರಿಸುತ್ತಾರೆ..

33 ವರ್ಷದ ಶಂಕರ್ ವಿಲಾಸ್​​ ಪಾಟೀಲ್​ ಮದುವೆ ಖರ್ಚಿಗೆಂದು 3 ಲಕ್ಷ ರೂಪಾಯಿ ಕೂಡಿಟ್ಟಿದ್ದರು.. ಕೊರೊನಾ ಸಂದರ್ಭದಲ್ಲಿ ಊಟ ಹಾಗೂ ಚಿಕಿತ್ಸೆ ಇಲ್ಲದೇ ನರಳುತ್ತಿದ್ದ ಜನರನ್ನ ಕಂಡು ಮರುಗುತ್ತಾರೆ.. ಮದುವೆಗೆಂದು ಕೂಡಿಟ್ಟ ಹಣವನ್ನ ಬಡವರ ಅನ್ನ ಹಾಗೂ ಆರೋಗ್ಯಕ್ಕೆ ವಿನಿಯೋಗಿಸುತ್ತಾರೆ.. ಇಂಟರೆಸ್ಟಿಂಗ್​ ಸಂಗತಿ ಏನಂದ್ರೆ, ಬಾಲ್ಯದಿಂದಲೇ ಶಂಕರ್​ ಪಾಟೀಲ್​ ಮಾಡುತ್ತಿದ್ದ ಸಮಾಜ ಸೇವೆಯನ್ನ ಸುತ್ತಮುತ್ತಲಿನ ಜನ ಗಮನಿಸುತ್ತಲೇ ಬಂದಿದ್ದರು.. ಇದೇ ಕಾರಣಕ್ಕೆ, ಬೆಳಗಾವಿ ಪಾಲಿಕೆ ಚುನಾವಣೆ ಬಂದಾಗ 7ನೇ ​ನಂಬರ್​ ವಾರ್ಡ್​ನ ಜನ ಶಂಕರ್​ ಪಾಟೀಲ್​ ಅವರನ್ನ ಚುನಾವಣೆಗೆ ನಿಲ್ಲುವಂತೆ ಪ್ರೋತ್ಸಾಹಿಸುತ್ತಾರೆ. ಅನೇಕ ಪಕ್ಷಗಳು ಟಿಕೆಟ್​ ಕೊಡಲು ಮುಂದಾಗುತ್ತವೆ.. ಆಗ ಜನರ ಒತ್ತಡಕ್ಕೆ ಮಣಿದ ಶಂಕರ್​, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.. ಶಂಕರ್ ಅವರಿಗೆ ಅದ್ಭುತ ಗೆಲುವು ಒಲಿದು ಬರುತ್ತೆ..

ಅಚ್ಚರಿ ಏನಂದ್ರೆ, ಚುನಾವಣೆಯಲ್ಲಿ ಗೆದ್ದು ವಿಜಯೋತ್ಸವ ಆಚರಿಸುವ ವೇಳೆ ಶಂಕರ್​ ಅವರಿಗೆ ಒಂದು ಫೋನ್​ ಬಂದಿತ್ತು.. ಕೂಡಲೇ ಸಂಭ್ರಮಾಚರಣೆ ನಿಲ್ಲಿಸಿದ ಅವರು, ಅನಾಥ ಶವವೊಂದರ ಅಂತ್ಯಕ್ರಿಯೆ ನೆರವೇರಿಸಲು ತೆರಳುತ್ತಾರೆ.. ಬೆಳಗಾವಿ ಮಹಾನಗರ ಪಾಲಿಕೆಯ ಕಾರ್ಪೊರೇಟರ್​ ಆದ್ರೂ ಇಂದಿಗೂ ಮೆಡಿಕಲ್​ ರೆಪ್​ ಕೆಲಸ ಮುಂದುವರೆಸಿದ್ದಾರೆ.. ಸಮಾಜ ಸೇವೆಯನ್ನ ಮರೆತಿಲ್ಲ.. ಇದೇ ಕಾರಣಕ್ಕೆ ಬೆಳಗಾವಿಯ ವಾರ್ಡ್​ ನಂಬರ್​ 7ರ ಜನ ಮುಂದೆ ನಿಂತು ಇವರನ್ನ ಜನನಾಯಕರನ್ನಾಗಿ ಮಾಡಿದ್ದಾರೆ.. ಆ ಜನನಾಯಕ ಶಂಕರ್​ ವಿಲಾಸ್​ ಪಾಟೀಲ್​ ಅವರೇ ಇಂದಿನ ನಮ್ಮ ಬಾಹುಬಲಿ..

Related Stories

No stories found.
TV 5 Kannada
tv5kannada.com