Tuesday, October 26, 2021

ನಮ್ಮ ಬಾಹುಬಲಿ: ಬೆರಗುಗೊಳಿಸುತ್ತೆ ಇವರ ಮೈ-ಕೈ ಆ್ಯಕ್ಷನ್.. ಇವರು ಕನ್ನಡದ ಮೈಕಲ್ ಜಾಕ್ಸನ್

Must read

ಇವರು ಡಾನ್ಸ್ ಡಾನ್ಸ್.. ರಾಜಾ ಡಾನ್ಸ್ ಎಂದು ಹಾಡುತ್ತಾ ಕುಣಿದಾಡುತ್ತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು.. ತಾಯಿ ಮಹಾನ್​ ಕಲಾವಿದೆಯಾಗಿದ್ದರು.. ಆದ್ರೆ ಅವರ ಯಾವುದೇ ಇನ್​ಫ್ಲುಯೆನ್ಸ್​ ಬಳಸದೇ ತಮ್ಮ ಪ್ರತಿಭೆಯಿಂದಲೇ ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡವರು.. ಸೋಲೋ ಹೀರೋ ಆಗಿ ಎಂಟ್ರಿಕೊಟ್ಟ ಇವರು, ನಂತರದ ದಿನಗಳಲ್ಲಿ ಮಲ್ಟಿಸ್ಟಾರರ್ ಸಿನಿಮಾಗಳಲ್ಲಿ ಅಭಿನಯಿಸಬೇಕಾಯ್ತು.. ಅವಕಾಶಗಳ ಕೊರತೆಯಾದಾಗ ಅದನ್ನೂ ಮೀರಿ ತಮ್ಮದೇ ಸ್ವಂತ ನಿರ್ಮಾಣದಲ್ಲಿ ಸಿನಿಮಾ ಮಾಡಿ, ಜನರನ್ನ ಮನರಂಜಿಸಿದರು.. ನಟಿಸಿದ್ದು ಬೆರಳೆಣಿಕೆಯಷ್ಟು ಸಿನಿಮಾಗಳಾದ್ರೂ, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪೂ ಮೂಡಿಸಿದ್ದಾರೆ.. ಪ್ರತಿಭೆ ಇದ್ದರೂ ಅದ್ಯಾಕೋ ಚಿತ್ರರಂಗದಲ್ಲಿ ಸುಧೀರ್ಘವಾಗಿ ಪ್ರಯಾಣ ಮಾಡೋಕೆ ಸಾಧ್ಯವಾಗಲಿಲ್ಲ.. ಹಾಗಂತ ಇವರಲ್ಲಿ ಅದರ ಬಗ್ಗೆ ಯಾವ ಬೇಸರವೂ ಇಲ್ಲ.. ಯಾಕಂದ್ರೆ, ಸಿನಿಮಾದಲ್ಲಿ ಸಿಗದೇ ಇರುವ ಖುಷಿಯನ್ನ ಕೃಷಿಯಲ್ಲಿ ಕಂಡುಕೊಂಡಿದ್ದಾರೆ.. ಕೃಷಿಯ ಜೊತೆಗೆ ತಮ್ಮನ್ನ ತಾವು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.. ಅವರೇ ಇವತ್ತಿನ  ನಮ್ಮ ಬಾಹುಬಲಿ ವಿನೋದ್ ರಾಜ್..

 

More articles

Latest article