Monday, November 29, 2021

ನಮ್ಮ ಬಾಹುಬಲಿ: ಹೂವು ಬೆಳೆಯುವ ರೈತ…ಹೂವಿನಂತೆಯೇ ಬದುಕುವ ಅನ್ನದಾತ

Must read

ಹೆಸರು ರಾಮಚಂದ್ರ ಗುಂಡಪ್ಪಗೋಳ.. ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ನಿವಾಸಿ. ಓದಿದ್ದು ಬಿಎ ಪದವಿ.. ಆದ್ರೆ ಇನ್ನೊಬ್ಬರ ಅಡಿಯಾಳಾಗಿ ಕೆಲಸ ಮಾಡದೇ, ಇದ್ದ ಭೂಮಿಯಲ್ಲಿ ರೈತನಾಗಲು ಬಯಸಿದ್ದರು.. ಕಡಿಮೆ ಜಮೀನಿನಲ್ಲಿ ಏನಾದ್ರೂ ಸಾಧನೆ ಮಾಡಬೇಕು ಎಂದು ಕನಸು ಕಂಡರು.. ಕೈ ಕೆಸರಾದರೆ ಬಾಯಿ ಮೊಸರು ಎನ್ನುವ ಮಾತನ್ನ ನಂಬಿ ಮೈ ಬಗ್ಗಿಸಿ ದುಡಿದರು.. ಆರಂಭದಲ್ಲಿ ಚೆಂಡು ಹೂವು ಬೆಳೆದು ನಷ್ಟ ಅನುಭವಿಸ್ತಾರೆ.. ಆದ್ರೆ ಇಟ್ಟ ಹೆಜ್ಜೆಯನ್ನ ಹಿಂದಿಡೋದಿಲ್ಲ.. ಮತ್ತೆ ಮತ್ತೆ ಪ್ರಯತ್ನಿಸ್ತಾರೆ.. ನೋಡ ನೋಡುತ್ತಲೇ ಯಶಸ್ಸು ಅವರ ಮುಂದೆ ಬಂದು ನಿಲ್ಲುತ್ತೆ.. ಹೂವು, ಬಾಳೆ, ಕಬ್ಬು ಹೀಗೆ ಎಲ್ಲದರಲ್ಲೂ ಲಾಭವನ್ನ ಗಳಿಸುತ್ತಾರೆ.. ರಾಜಾಪುರ ಗ್ರಾಮದ ಈ ಮಾದರಿ ರೈತ ರಾಮಚಂದ್ರ ಗುಂಡಪ್ಪಗೋಳ ಅವರು ಇತರರಿಗೆ ಸ್ಫೂರ್ತಿಯಾಗುತ್ತಾರೆ.. ಕೃಷಿಯಲ್ಲಿ ಸಾಧನೆಯ ಶಿಖರವನ್ನ ಏರುತ್ತಾರೆ..

ಕಡಿಮೆ ಭೂಮಿ, ಕಡಿಮೆ ನೀರು, ಸಂಪೂರ್ಣ ಸಾವಯವ ಹಾಗೂ ಸಮಗ್ರ ಕೃಷಿಯಲ್ಲಿ ಯಶಸ್ಸು ಕಂಡ ರಾಜಾಪುರ ಗ್ರಾಮದ ರೈತ ರಾಮಚಂದ್ರ ಗುಂಡಪ್ಪಗೋಳ ಅವರು ಅನುಸರಿಸುತ್ತಿರುವ ಕೃಷಿ ಪದ್ಧತಿ ನಿಜಕ್ಕೂ ಪ್ರತಿ ರೈತರಿಗೂ ಸ್ಫೂರ್ತಿ ಎನಿಸಿದೆ.. ಅವರ ಸಾಧನೆ ಎಂಥವರನ್ನೂ ಹುಬ್ಬೇರಿಸುವಂತೆ ಮಾಡಿದೆ.. ಆ ಸಾಧಕ ರಾಜಾಪುರದ ರಾಜಾಹುಲಿ ರಾಮಚಂದ್ರ ಗುಂಡಪ್ಪಗೋಳ ಅವರೇ ಇಂದಿನ ನಮ್ಮ ಬಾಹುಬಲಿ

Latest article