Tuesday, October 26, 2021

ನಮ್ಮ ಬಾಹುಬಲಿ: ಅವಮಾನ, ಅಪಮಾನ ಮೆಟ್ಟಿನಿಂತ ಕನ್ನಡ ಚಿತ್ರರಂಗದ ಖ್ಯಾತ ಸ್ಟಂಟ್ ಮಾಸ್ಟರ್

Must read

ಮಲೆ ಮಹದೇಶ್ವರ ಬೆಟ್ಟದ ಕಡುಬಡ ಕುಟುಂಬದಲ್ಲಿ ಜನಿಸಿದ ಈ ಮಾದೇವ, ಚಿಕ್ಕಂದಿನಿಂದಲೇ ಕೂಲಿ ಕೆಲಸ ಮಾಡುತ್ತಾ ಬಡತನದ ಬೇಗೆಯಲ್ಲಿ ಬೆಂದವರು.. ಆದರೂ ಚಿಕ್ಕಂದಿನಿಂದಲೇ ಸಿನಿಮಾ ಆಸಕ್ತಿ.. ಹೀಗಾಗಿ ಬಡತನದ ಜೊತೆಗೆ ಬಡಿದಾಡುತ್ತಲ್ಲೇ ಫೈಟ್ ಹಾಗೂ ಸ್ಟಂಟ್​ ಮಾಡುವುದನ್ನ ​ ಕಲಿತರು.. ಕೈ ತುಂಬ ಸಾಲ ಮಾಡಿಕೊಂಡು ಸಾಧಿಸಬೇಕು ಅನ್ನೋ ಛಲದಿಂದ ಬೆಂಗಳೂರಿಗೆ ಕಾಲಿಡ್ತಾರೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ.. ಆದರೂ ಕಂಡ ಕನಸನ್ನ ನನಸು ಮಾಡಲೇಬೇಕು ಎನ್ನುವ ಛಲ.. ಫೈಟರ್ ಆಗಿ ಸಿನಿಮಾರಂಗಕ್ಕೆ ಬಂದ ಇವರು, 100 ಅಡಿ ಎತ್ತರದಿಂದ ಜಿಗಿಯೋಕೂ ಜೈ.. ಮೈ ಮೂಳೆ ಮುರಿದು ಹೋದರೂ ಎಂತದ್ದೇ ಸ್ಟಂಟ್ ಮಾಡೋಕೂ ಸೈ ಅಂತಿದ್ರು.. ಅದೆಷ್ಟೋ ಬಾರಿ ಸಾವಿನ ಕದ ತಟ್ಟಿ ಬಂದಿದ್ದಾರೆ ಮಾದೇವ.. ಇದೆಲ್ಲದರ ನಡುವೆ ಅವಮಾನ, ಅಪಮಾನ, ಕಣ್ಣೀರು ಕಾಮನ್​ ಆಗಿ ಹೋಗಿತ್ತು.. ಆದರೆ ಎಷ್ಟೇ ಕಷ್ಟಗಳು ಎದುರಾದರೂ ಅದೆಲ್ಲವನ್ನು ಮೆಟ್ಟಿ ನಿಂತು ಕನ್ನಡ ಚಿತ್ರರಂಗದ ಖ್ಯಾತ ಸ್ಟಂಟ್​ ಮಾಸ್ಟರ್ ಆಗಿ ಹೆಸರು ಮಾಡಿದ್ದಾರೆ.. ಇವರೇ ಇವತ್ತಿನ ನಮ್ಮ ಬಾಹುಬಲಿ ಮಾಸ್ ಮಾದ..

More articles

Latest article