Tuesday, May 17, 2022

ನಮ್ಮ ಬಾಹುಬಲಿ: ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಕನ್ನಡ ಪತಾಕೆ ಹಾರಿಸಿದ ಗಂಡುಗಲಿ ಶ್ರೀನಿವಾಸ್ ತಾಳೂಕರ್

Must read

ಹೆಸರು ಶ್ರೀನಿವಾಸ ತಾಳೂಕರ್​.. ವೀರ ಕನ್ನಡಿಗ.. ಮೂಲತಃ ಗಡಿ ಜಿಲ್ಲೆ ಬೆಳಗಾವಿಯ ನೇಕಾರ ಕುಟುಂಬದವರು.. ಕನ್ನಡ ಪ್ರೇಮ ಅನ್ನೋದು ರಕ್ತಗತವಾಗಿ ಬಂದಿದೆ.. ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿದ್ದ ದೌರ್ಜನ್ಯ, ಇವರನ್ನ ಕನ್ನಡ ಸಂಘವೊಂದನ್ನ ಕಟ್ಟೋಕ್ಕೆ ಪ್ರೇರೇಪಿಸುತ್ತೆ.. 1994ರಲ್ಲಿ ಸರ್ವೋದಯ ಸ್ವಯಂ ಸೇವಾ ಸಂಘದ ಹೆಸರಿನಲ್ಲಿ ಕನ್ನಡ ಉಳಿಸುವ ಪ್ರಯತ್ನ ಶುರುವಾಗುತ್ತೆ.. ಅಂದಿನಿಂದ ಇಂದಿನವರೆಗೂ ಕನ್ನಡ ನಾಡು, ನುಡಿ, ನೆಲ, ಜಲದ ಪ್ರಶ್ನೆ ಬಂದಾಗೆಲ್ಲಾ ಹೋರಾಟಕ್ಕೆ ನಿಂತಿದ್ದಾರೆ.. ಬೆಳಗಾಂ ಎಂದು ಕರೆಯುತ್ತಿದ್ದ ಗಡಿ ಜಿಲ್ಲೆಗೆ ಬೆಳಗಾವಿ ಎಂದು ಅಧಿಕೃತವಾಗಿ ಮರುನಾಮಕರಣಕ್ಕೆ ಮೂಲ ಕಾರಣ ಇವರೇ.. ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಮೊಟ್ಟ ಮೊದಲ ಬಾರಿಗೆ ಕನ್ನಡ ಬಾವುಟವನ್ನ ಹಾರಿಸಿದ ಗಂಡುಗಲಿ ಕೂಡ ಇವರೇ.. ಬೆಳಗಾವಿಯ ಪ್ರಮುಖ ಕಟ್ಟಡಗಳ ಮೇಲೆ ಕನ್ನಡ ಬಾವುಟ ಹಾಗೂ ಕನ್ನಡ ನಾಮಫಲಕಗಳು ಬರುವಂತೆ ಮಾಡಿದ್ದು ಇವರೇ.. ಬೆಳಗಾವಿಯಲ್ಲಿ ಎಲ್ಲವೂ ಕನ್ನಡಮಯವಾಗಬೇಕು ಅನ್ನೋದೇ ಇವರ ದ್ಯೇಯ.. ಬೆಳಗಾವಿ ಕನ್ನಡಿಗರ ಸ್ವತ್ತು ಎಂದು ಸಾರುತ್ತಾ, ಕನ್ನಡ ಪ್ರೇಮ ಮೆರೆಯುತ್ತಿರುವ ವೀರ ಕನ್ನಡಿಗ ಹೋರಾಟಗಾರ ಶ್ರೀನಿವಾಸ್ ತಾಳೂಕರ್ ಅವರೇ ಇವತ್ತಿನ ನಮ್ಮ ಬಾಹುಬಲಿ..

Latest article