ಹೆಸರು ಡಾ.ಪಿ.ಸಿ.ಶ್ರೀಕಾಂತ್.. ಹಾಸನದ ಗೊರೂರು ಗ್ರಾಮದ ರೈತಕುಟುಂಬದಲ್ಲಿ ಜನಿಸಿದವರು.. ಉನ್ನತ ಶಿಕ್ಷಣದ ನಂತರ ಸಂಶೋಧನ ಕ್ಷೇತ್ರದಲ್ಲಿ ಏನಾದ್ರೂ ಸಾಧಿಸಬೇಕು ಅನ್ನೋ ಹಂಬಲ ಇವರದ್ದು.. ಕೋವಿಡ್ 19 ಸಂದರ್ಭದ ಒಂದಷ್ಟು ಘಟನೆಗಳು ಇವರ ಮೇಲೆ ಪರಿಣಾಮ ಬೀರುತ್ತವೆ.. ಕೋವಿಡ್ ಟೆಸ್ಟ್ ಮಾಡಿಸಿದ ನಂತರ ರಿಪೋರ್ಟ್ಗಾಗಿ 24 ಗಂಟೆ, 3 ದಿನಗಳ ಕಾಲ ಕಾಯುವ ಪರಿಸ್ಥಿತಿ ಇತ್ತು.. ಅದನ್ನೆಲ್ಲಾ ಕಂಡ ಡಾ.ಶ್ರೀಕಾಂತ್ ಅವರು, ಹೊಸ ಯಂತ್ರವೊಂದರ ಸಂಶೋಧನೆ ಶುರುಮಾಡ್ತಾರೆ.. ಅದರಂತೆ ನ್ಯಾನೊ ಫೊಟಾನಿಕ್ ಸೆನ್ಸಾರ್ವೊಂದನ್ನ ಕಂಡುಹಿಡಿಯುತ್ತಾರೆ.. ಈ ವಿಶೇಷ ಯಂತ್ರ ಏನಂದ್ರೆ, ಖಾಯಿಲೆ ಯಾವುದೇ ಇರಲಿ, ವೈರಸ್ ಯಾವುದೇ ಇರಲಿ, ಕ್ಷಣಮಾತ್ರದಲ್ಲಿ ಪತ್ತೆ ಹಚ್ಚುತ್ತೆ.. ಡಾ.ಶ್ರೀಕಾಂತ್ ಅವರು ಹಿಂದೆ ಕೂಡ ಸಾಕಷ್ಟು ರಿಸರ್ಚ್ ಮಾಡಿ ಇಂಟರ್ ನ್ಯಾಷನಲ್ ಅವಾರ್ಡ್ಗಳನ್ನ ಮುಡಿಗೇರಿಸಿಕೊಂಡಿದ್ದಾರೆ.. ಸಂಶೋಧಕ ಮಾತ್ರವಲ್ಲ ಇವರೊಬ್ಬ ಪರಿಸರ ಪ್ರೇಮಿಯೂ ಹೌದು.. ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ.. ಹಾಸನದ ಮಲೆನಾಡು ಕಾಲೇಜಿನ ಡೀನ್ ಆಗಿರುವ ಡಾ.ಪಿ.ಸಿ.ಶ್ರೀಕಾಂತ್ ಅವರೇ ಇಂದಿನ ನಮ್ಮ ಬಾಹುಬುಲಿ..