Tuesday, August 16, 2022

ನಮ್ಮ ಬಾಹುಬಲಿ: ಅಂಧ ಮಕ್ಕಳ ಕರ್ನಾಟಕ ಬುಕ್ ಆಫ್ ರೆಕಾರ್ಡ್ ಸಾಧನೆಗೆ ಇವರೇ ಬೆನ್ನೆಲುಬು

Must read

ಇವರು ಅಂತರಾಷ್ಟ್ರೀಯ ಯೋಗಪಟು..ತಾವು ಕಲಿತಿರೋ ಯೋಗದಿಂದ ಅಂಧ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ..ಅಂಧ ಮಕ್ಕಳು ಮತ್ತು ವಿಶೇಷ ಚೇತನ ಮಕ್ಕಳಿಗಾಗಿಯೇ ವಸತಿ ಶಾಲೆಯೊಂದನ್ನ ನಿರ್ಮಾಣ ಮಾಡಿದ್ದು, ಯೋಗ, ಕ್ರೀಡೆ, ಕಂಪೂಟ್ಯರ್, ಶಿಕ್ಷಣವನ್ನ ಉಚಿತವಾಗಿ ನೀಡ್ತಿದ್ದಾರೆ..ಸುಮಾರು 12 ವರ್ಷಗಳಿಂದ ಯೋಗ ಸಾಧನೆ ಮತ್ತು ಸೇವೆ ಮಾಡ್ತಿದ್ದು, ಯೋಗದ ಮೂಲಕ ವಿಶೇಷ ಚೇತನ ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ತಂದಿದ್ದಾರೆ..ರಾಷ್ಟ್ರೀಯ ಅಂತರಾಷ್ಟ್ರೀಯ ಯೋಗ ಸ್ಪರ್ಧೆ ಮತ್ತು ಪ್ರದರ್ಶನಗಳಲ್ಲಿ ಅಂಧ ಮಕ್ಕಳ ಭಾಗವಹಇಸುವಂತೆ ಮಾಡಿದ್ದಾರೆ.. ಶಿವಾನಂದ ಕೇಲೂರು ಅವರ ಬಳಿ ಯೋಗ ಕಲಿತ ಮಕ್ಕಳು ಕರ್ನಾಟಕ ಬುಕ್​ ಆಫ್​ ರೆಕಾರ್ಡ್​ನಲ್ಲಿ ಮಲ್ಲಕಂಬ ಕಸರತ್ತಿನ ಮೂಲಕ ದಾಖಲೆ ಬರೆದಿದ್ದಾರೆ..12 ವರ್ಷಗಳಿಂದ ಅಂಧ ಮತ್ತು ವಿಶೇಷ ಚೇಥನ ಮಕ್ಕಳ ಬೆಳವಣಿಗೆಗಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ..

Latest article