ಹೆಸರು ಶೀತಲ್ ಕೊಲ್ಲಾಪುರ.. ಮೂಲತಃ ಬೆಳಗಾವಿಯವರು.. ಕಡು ಬಡತನದಲ್ಲಿ ಅರಳಿದ ಕ್ರೀಡಾ ಪ್ರತಿಭೆ.. 5ನೇ ತರಗತಿಯಲ್ಲೇ ಕ್ರೀಡಾ ಜರ್ನಿ ಶುರುಮಾಡಿದ್ದರು.. ಬಾಲ್ಯದಲ್ಲಿ ಸ್ಪೋರ್ಟ್ ಶೂ ಖದೀರಿಸಲು ಇವರ ಬಳಿ ಹಣವಿರಲಿಲ್ಲ.. ಹೀಗಾಗಿ ಬರಿಗಾಲಿನಲ್ಲೇ ಓಡಿದರು.. ಬಿಎ, ಬಿಪಿಎಡ್ ಪದವಿ ಪಡೆದಿರುವ ಶೀತಲ್ ಅವರ ಜರ್ನಿ ನಿಜಕ್ಕೂ ರೋಚಕ.. ಕ್ರೀಡೆಯಲ್ಲಿ ಏನಾದ್ರೂ ಸಾಧನೆ ಮಾಡಬೇಕು ಎನ್ನುವ ಹಂಬಲವಿತ್ತು.. ಹೀಗಾಗಿಯೇ ಎಷ್ಟೇ ಕಷ್ಟ-ಸಮಸ್ಯೆಗಳ ಎದುರಾದ್ರೂ ಬಹುದೊಡ್ಡ ಸಾಧನೆ ಮಾಡಿದ್ದಾರೆ.. ನ್ಯೂಜಿಲೆಂಡ್, ಮಲೇಷಿಯಾ, ಶ್ರೀಲಂಕಾ ದೇಶದಲ್ಲಿ ನಡೆದ ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪದಕಗಳನ್ನ ಗೆದ್ದು ತಂದಿದ್ದಾರೆ. ಇದುವರೆಗೆ 100ಕ್ಕೂ ಅಧಿಕ ಪದಕಗಳನ್ನ ಗೆದ್ದಿದ್ದಾರೆ.. ಅಂತಾರಾಷ್ಟ್ರೀಯ ಮಟ್ಟದಲ್ಲಿ 10 ಪದಕ, ರಾಷ್ಟ್ರ ಮಟ್ಟದಲ್ಲಿ 20 ಪದಕಗಳನ್ನ ತಮ್ಮ ಸಾಧನೆಯ ಮುಡಿಗೆ ಏರಿಸಿಕೊಂಡಿದ್ದಾರೆ.. ಶ್ರೀಲಂಕಾ ಸರ್ಕಾರ ಶ್ರೇಷ್ಠ ಮಹಿಳಾ ಕ್ರೀಡಾಪಟು ಪ್ರಶಸ್ತಿ ನೀಡಿ ಇವರನ್ನ ಗೌರವಿಸಿದೆ.. ಎಷ್ಟೇ ಪ್ರತಿಭೆಯಿದ್ದರೂ ಸರ್ಕಾರಿ ಕೆಲಸದಿಂದ ವಂಚಿತರಾಗಿ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.. ಮೀಂಚಿನ ಓಟಗಾರ್ತಿ ಎಂದೇ ಕರೆಸಿಕೊಳ್ಳುವ ಶೀತಲ್ ಅವರೇ ಇಂದಿನ ನಮ್ಮ ಬಾಹುಬಲಿ…