ಇವರು ಮೈಸೂರಿನ ಜಯನಗರ ನಿವಾಸಿ ಶಶಿಕುಮಾರ್. ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಇವರು ಓದಿದ್ದೆಲ್ಲಾ ಸರ್ಕಾರಿ ಶಾಲೆಯಲ್ಲಿಯೇ..ಎಸ್ಎಸ್ಎಲ್ಸಿ ವೇಳೆಗೆ ತೃತೀಯ ಲಿಂಗಿಯಾಗಿ ಬದಲಾದ ಇವರು ಅಂದಿನಿಂದ ಪಟ್ಟ ಪಾಡು ಅಷ್ಟಿಷ್ಟಲ್ಲ..ಮನೆಯ ಒಳಗೂ, ಹೊರಗೂ ಬರೀ ಅವಮಾನ,ಅಪಮಾನ..ಆದರೆ ಸಮಾಜದ ಈ ಶೋಷಣೆ, ದೌರ್ಜನ್ಯವನ್ನ ಮೆಟ್ಟಿ ನಿಂತು, ಶಿಕ್ಷಣದ ಮೂಲಕ ಬದಲಾವಣೆ ತರೋ ಕನಸು ಕಂಡವರು ಶಶಿ..ಶಾಲಾ ದಿನಗಳಲ್ಲೇ ದುಡಿಯೋಕ್ಕೆ ಶುರುಮಾಡಿ, ಬಂದ ಹಣದಿಂದ ಫೀಸ್ ಕಟ್ಟಿಕೊಂಡು, ಸದ್ಯ ಕಾನೂನು ಪದವಿ ಪಡೆದಿದ್ದಾರೆ..ತಮ್ಮಂತಹ ತೃತೀಯ ಲಿಂಗಿಗಳಿಗೆ ಪ್ರೇರಣೆಯಾಗಿದ್ದಾರೆ.