Tuesday, May 17, 2022

ನಮ್ಮ ಬಾಹುಬಲಿ: ಮಲೆನಾಡಿನಲ್ಲಿ ಸವಾಲಾದ ಬೆಳೆಗಳನ್ನ ಬೆಳೆದು ಯಶಸ್ಸು ಕಂಡರು

Must read

ಹೆಸರು ಶಂಕರ ಮೂರ್ತಿ.. ಮೂಲತಃ ತೀರ್ಥಹಳ್ಳಿಯ ಕುಪ್ಪಳ್ಳಿಯವರು.. ವಿದ್ಯಾಭ್ಯಾಸದ ನಂತರ ಷೇರು ಮಾರುಕಟ್ಟೆಯ ತಜ್ಯರಾಗಿ ವೃತ್ತಿ ಆರಂಭಿಸಿದರು.. ಕೋಟಿಗಟ್ಟಲೆ ಹಣದ ವ್ಯವಹಾರ.. ಶಿವಮೊಗ್ಗದಲ್ಲೇ ಹೈಯೆಸ್ಟ್ ಟ್ಯಾಕ್ಸ್​ ಪೇಯರ್ ಎನಿಸಿಕೊಳ್ತಾರೆ.. ಆದ್ರೆ ದುರಾದೃಷ್ಟವಶಾತ್ ಷೇರು ಬ್ಯುಸಿನೆಸ್​ನಲ್ಲಿ ನಷ್ಟ ಅನುಭವಿಸಬೇಕಾಯ್ತು.. ಷೇರು ಮಾರುಕಟ್ಟೆ ಕೈ ಕೊಟ್ರು, ಭೂಮಿತಾಯಿ ಇವರ ಕೈ ಬಿಡಲಿಲ್ಲ.. ಎಸಿ ರೂಂನಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡ್ತಿದ್ದವರು, ಭೂಮಿತಾಯಿಯ ಸೇವೆ ಮಾಡೋಕೆ ಶುರುಮಾಡ್ತಾರೆ.. ಮೆನೆಮೆನಗೆ ಹಾಲು ಹಾಕ್ತಾರೆ.. ಮಲೆನಾಡಿಗೆ ಮಾಡಹಾಗಲ ಎಂಬ ಹಾಗಲಕಾಯಿಯ ವಿಶೇಷ ತಳಿಯನ್ನ ಪರಿಚಯಿಸುತ್ತಾರೆ.. ಮಾಡಹಾಗಲ ಬೆಳೆದು, ಸ್ವತಃ ರೈತರ ಸಂತೆಗಳಿಗೆ ಹೋಗಿ ಮಾರಾಟ ಮಾಡೋಕೆ ಆರಂಭಿಸ್ತಾರೆ.. ಅಲ್ಲಿಂದ ಯಶಸ್ವಿ ರೈತನಾಗುವ ಕಡೆಗೆ ಹೆಜ್ಜೆ ಇಡ್ತಾರೆ.. ಸದ್ಯ ಇವರು ಬೆಳೆಯುತ್ತಿರುವ ಮಾಡಹಾಗಲಕ್ಕೆ ಬಹಳಷ್ಟು ಬೇಡಿಕೆ ಇದೆ.. ಆ ಮೂಲಕ ಲಕ್ಷಗಟ್ಟಲೆ ಆದಾಯ ಪಡೆಯುತ್ತಿದ್ದಾರೆ.. ಷೇರಿನಲ್ಲಿ ಕಳೆದುಕೊಂಡಿದನ್ನೆಲ್ಲಾ ಕೃಷಿಯಲ್ಲಿ ಪಡೆದಿದ್ದಾರೆ.. ಆ ಮೂಲಕ ಯಶಸ್ವಿ ಕೃಷಿಕ ಎನಿಸಿಕೊಂಡಿದ್ದಾರೆ ಶಂಕರಮೂರ್ತಿಯವರು.. ಅವರೇ ಇಂದಿನ ನಮ್ಮ ಬಾಹುಬಲಿ.

Latest article