Monday, November 29, 2021

ನಮ್ಮ ಬಾಹುಬಲಿ: ರಿಟೈರ್ಡ್ ಲೈಫ್​ನಲ್ಲಿ ಕೈ ಕಟ್ಟಿ ಕೂರಲಿಲ್ಲ.. ಕೃಷಿಯಲ್ಲಿ ಸಾಧನೆ ಮಾಡಿದ ಸಾಧಕ..

Must read

ಇವರು ಸತತ 31 ವರ್ಷಗಳ ಕಾಲ ಇಂಜಿನಿಯರ್​ ವೃತ್ತಿಯಲ್ಲಿದ್ದುಕೊಂಡು ಬೆಂಗಳೂರಿನಲ್ಲಿ ಜೀವನ ಕಳೆದವರು. ಆ ನಂತರ ರಿಟೈರ್ಡ್​ ಲೈಫ್​ ಕಳೆಯೋಕೆ ಹುಟ್ಟೂರಿಗೆ ವಾಪಸ್​ ಹೋದ ಶಂಕರ ಕರಬಸಪ್ಪವನರು, ಹಾಯಾಗಿ  ಸುಮ್ಮನೆ ಕೈ ಕಟ್ಟಿ ಕೂರಲಿಲ್ಲ.. ವೃತ್ತಿ ಬದುಕಿನ ನಂತರ ನಿವೃತ್ತಿ ಬದುಕನ್ನ ಕೃಷಿಕನಾಗಿ ಕಳೀಬೇಕು ಎಂದು ನಿರ್ಧಾರ ಮಾಡಿದರು.. ತಮ್ಮದೇ ಕೂಡಿಟ್ಟ ಹಣದಿಂದ ಭೂಮಿ ಖರೀದಿ ಮಾಡುತ್ತಾರೆ.. 55 ಎಕರೆ ಗುಡ್ಡಗಾಡು ಪ್ರದೇಶವನ್ನ, ಒಂದೂವರೆ ವರ್ಷದ ಪರಿಶ್ರಮದಿಂದ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿ, ಇದೀಗ ಬೆಳೆ ಬೆಳೆಯುತ್ತಿದ್ದಾರೆ.. ಸಮಗ್ರ ಕೃಷಿ, ನೈಸರ್ಗಿಕ ಕೃಷಿಯ ಮೂಲಕ ವಿವಿಧ ರೀತಿಯ ಬೆಳೆ ಬೆಳೆದು, ವರ್ಷಕ್ಕೆ ಲಕ್ಷಗಟ್ಟಲೆ ಆದಾಯ ಪಡೆಯುತ್ತಿದ್ದಾರೆ.. 79ನೇ ವಯಸ್ಸಿನಲ್ಲಿಯೂ ಬಿಡದೇ ವ್ಯವಸಾಯ ವೃತ್ತಿಯನ್ನ ಖುಷಿಯಿಂದ ಮಾಡುತ್ತಿದ್ದಾರೆ.. ಅಷ್ಟೇ ಅಲ್ಲ.. ಮಕ್ಕಳು ಮೊಮ್ಮೊಕ್ಕಳು ಕೂಡ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದ್ದಾರೆ.. ಯುವಕರಿಗೆ ಮಾದರಿಯಾಗುವ ಪ್ರಗತಿಪರ ರೈತ ಶಂಕರ ಕರಬಸಪ್ಪವನರೇ ಇಂದಿನ ನಮ್ಮ ಬಾಹುಬಲಿ.

Latest article