ಹೆಸರು ಶಾಲಿನಿ ಶೆಟ್ಟಿ.. ಮೂಲತಃ ಉಡುಪಿ ಜಿಲ್ಲೆಯವರು.. ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದ ಶಾಲಿನಿ ಶೆಟ್ಟಿಯವರಿಗೆ ಚಿಕ್ಕವಯಸ್ಸಿನಿಂದಲೂ ಕ್ರೀಡೆಯಲ್ಲಿ ಆಸಕ್ತಿ.. ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗೆ ಬೇಕಾದ ಸವಲತ್ತುಗಳು ಸಿಗದೇ ಇದ್ದರೂ, ಕ್ರೀಡೆಯಲ್ಲಿ ಏನಾದ್ರೂ ಸಾಧಿಸಬೇಕು ಅನ್ನೋ ಹಂಬಲ ಇವರದ್ದಾಗಿತ್ತು.. ಸ್ಕೂಲು-ಕಾಲೇಜು ದಿನಗಳಲ್ಲಿ ರನ್ನಿಂಗ್, ಜಾವೆಲಿನ್ ಥ್ರೋ, ಶಾಟ್ಪುಟ್ ಆಟಗಳನ್ನ ಆಡ್ತಾ ಇದ್ರು.. ಮುಂದೊಂದು ದಿನ ಅದೇ ಅಥ್ಲೆಟಿಕ್ಸ್ನಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ರು.. ಅಷ್ಟೇ ಅಲ್ಲಾ, ಏಷ್ಯನ್ ಗೇಮ್ಸ್ಗೂ ಸೆಲೆಕ್ಟ್ ಆಗಿದ್ರು.. ಈಗ ತಮ್ಮಂತೆಯೇ ಕ್ರೀಡೆಯಲ್ಲಿ ಸಾಧನೆ ಮಾಡುವ ಆಸಕ್ತಿ ಹೊಂದಿರುವ ಮಕ್ಕಳಿಗೆ ಉಚಿತ ಟ್ರೈನಿಂಗ್ ಕೊಡ್ತಿದ್ದಾರೆ.. ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರ್ಥಿಕ ಸಹಾಯ ಮಾಡಿದ್ದಾರೆ.. ಆ ಮೂಲಕ ತಮ್ಮನ್ನ ತಾವು ಕ್ರೀಡಾ ಕ್ಷೇತ್ರಕ್ಕೆ ಅರ್ಪಿಸಿಕೊಂಡಿದ್ದಾರೆ.. ನಾಡಿನ ಆ ಕ್ರೀಡಾ ಸ್ಫೂರ್ತಿ ಶಾಲಿನಿ ಶೆಟ್ಟಿಯವರೇ ಇಂದಿನ ನಮ್ಮ ಬಾಹುಬಲಿ.