ಹೆಸರು ರೇವಣಸಿದ್ದಪ್ಪ.. ಮೂಲತಃ ತುಮಕೂರು ಜಿಲ್ಲೆಯವರು.. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು, ಎಸ್ಎಸ್ಎಲ್ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದು, ಇಂದು ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದಾರೆ.. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇಂಗ್ಲೀಷ್ ಕಬ್ಬಿಣದ ಕಡಲೆ ಅನ್ನೋ ಮಾತನ್ನ ಸುಳ್ಳಾಗಿಸಿದ್ದಾರೆ.. ಶ್ರದ್ಧೆಯಿಂದ ಕಷ್ಟಪಟ್ಟು ಓದಿ, ತುಮಕೂರು ಜಿಲ್ಲೆಗೆ ಹೆಸರುವಾಸಿ ಆಂಗ್ಲ ಪ್ರಾಧ್ಯಾಪಕರಾಗಿದ್ದಾರೆ.. ನಿವೃತ್ತಿಯ ನಂತರವೂ ಬಡ ಮಕ್ಕಳಿಗೆ, ಪೋಷಕರಿಗೆ, ಶಿಕ್ಷಕರಿಗೆ ಉಚಿತವಾಗಿ ಆಂಗ್ಲ ಭಾಷೆಯ ತರಬೇತಿ ನೀಡುತ್ತಿದ್ದಾರೆ.. ಸ್ವತಃ ಇಂಗ್ಲೀಷ್ ಭಾಷಾ ಅಧ್ಯಯನದ ಕುರಿತು 12 ಪುಸ್ತಕಗಳನ್ನ ರಚಿಸಿದ್ದು, ಅವಶ್ಯಕತೆ ಇರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಂಚುತ್ತಾರೆ.. 33 ವರ್ಷಗಳಲ್ಲಿ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿರುವ ಕೀರ್ತಿ ಪ್ರಾಧ್ಯಾಪಕ ರೇವಣಸಿದ್ದಪ್ಪ ಅವರಿಗೆ ಸಲ್ಲುತ್ತೆ.. ಬಡಮಕ್ಕಳ ಇಂಗ್ಲಿಷ್ ಶಿಕ್ಷಕ ರೇವಣಸಿದ್ದಪ್ಪನವರೇ ಇಂದಿನ ನಮ್ಮ ಬಾಹುಬಲಿ.