Friday, January 21, 2022

ನಮ್ಮ ಬಾಹುಬಲಿ: ಬೆಳಗಾವಿ ಕನ್ನಡಿಗರ ಸ್ವತ್ತು ಅಂತ ಘಂಟಾಘೋಷವಾಗಿ ಹೇಳೋಕ್ಕೆ ಇವರ ಬಳಿಯಿರೋ ದಾಖಲೆಗಳೆ ಸಾಕು..

Must read

ಇವರು ಮೂಲತ: ಬೆಳಗಾವಿಯವರು..ಚಿಕ್ಕಂದಿನಿಂದಲೂ ಬೆಳಗಾವಿ ವಿವಾದವನ್ನ ಬಹಳ ಹತ್ತಿರದಿಂದ ನೋಡಿಕೊಂಡು ಬಂದವರು..ಆದರೆ ಈಗ ಅದೇ ಬೆಳಗಾವಿ ನಮ್ಮದೇ ಅಂತ ಘಂಟಾಘೋಷವಾಗಿ ಹೇಳುವಂತ ಎಷ್ಟೊ ದಾಖಲೆಗಳನ್ನ ಸಂಗ್ರಹಿಸಿದ್ದಾರೆ ರವೀಂದ್ರ ತೋಟಗೇರಿ..ಇವರ ರಕ್ತದಲ್ಲೇ ಕನ್ನಡ ಪ್ರೇಮ ಬೆರೆತು ಹೋಗಿದೆ..ಹಾಗಾಗಿ ಕನ್ನಡ ಪರ ಕಾನೂನು ಪರ ಹೋರಾಟಕ್ಕೆ ಬೇಕಾಗುವ ದಾಖಲೆಗಳನ್ನ ಸಂಗ್ರಹಿಸೋದೇ ಇವರ ಜೀವನದ ಗುರಿಯಾಗಿದೆ..ವೃತ್ತಿಯಲ್ಲಿ ವಕೀಲರಾದರೂ, ಪ್ರವೃತ್ತಿಯಲ್ಲಿ ದಾಖಲೆಗಳ ಸಂಗ್ರಹಗಾರ..ಸತತ 20 ವರ್ಷಗಳಿಂದ 20 ಸಾವಿರಕ್ಕೂ ಹೆಚ್ಚು ದಾಖಲೆಗಳನ್ನ ಸಂಗ್ರಹಿಸಿದ್ದಾರೆ..ಬೆಳಗಾವಿ ಕರ್ನಾಟಕದ ಸ್ವತ್ತು ಅಂತ ಹೇಳೋಕ್ಕೆ ಈಗಾಗ್ಲೇ ಸಾಕಷ್ಟು ದಾಖಲೆಗಳನ್ನ ಸಂಗ್ರಹಿಸಿ., ಕಾನೂನು ಹೋರಾಟಕ್ಕೆ ತಮ್ಮದೇ ಆದ ರೀತಿಯಲ್ಲಿ ಕಾಂಟ್ರಿಬ್ಯೂಟ್ ಮಾಡಿದ್ದಾರೆ..ಅಷ್ಟೇ ಅಲ್ಲ..ವಕೀಲರಷ್ಟೇ ಅಲ್ಲದೇ ಸಾಹಿತಿಯಾಗಿಯೂ, ಕನ್ನಡ ಪ್ರೇಮಿಯಾಗಿಯೂ, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

Latest article