ಹೆಸರು ರಾಮಕ್ಕ.. ಮೂಲತಃ ತುಮಕೂರಿನವರು.. ಹಂದಿಜೋಗರು ಎನ್ನುವ ಅಲೆಮಾರಿ ಜನಾಂಗದ ಹೆಣ್ಣುಮಗಳು.. ಬಾಲ್ಯದಿಂದ ಪ್ರೌಡಾವಸ್ಥೆಗೆ ಬರುವವರೆಗೂ ಊರುರು ಅಲೆದಾಡಿ ಜೀವನ ನಡೆಸಿದ್ದಾರೆ.. ನಂತರ ನೆಲೆ ನಿಂತಿದ್ದು ತುಮಕೂರಿನಲ್ಲಿ.. ಚಿಕ್ಕಂದಿನಿಂದಲೂ ಕಷ್ಟಗಳನ್ನೇ ನೋಡಿಕೊಂಡು ಬಂದ ಇವರಿಗೆ ಅಕ್ಷರದ ಅರಿವಿಲ್ಲ.. ಶಿಕ್ಷಣದ ಗಂಧ ಗಾಳಿಯೂ ಗೊತ್ತಿಲ್ಲ.. ಬಿಕ್ಷಾಟನೆ ಮಾಡುತ್ತ ಹಸಿವು ನೀಗಿಸಿಕೊಳ್ತಿದ್ದ ಕುಟುಂಬ.. ಆದ್ರೆ ಇಂದು ಇದೇ ರಾಮಕ್ಕ ಅಲೆಮಾರಿ ಜನಾಂಗದ ಆಶಾಕಿರಣವಾಗಿದ್ದಾರೆ.. ತಮ್ಮ ಜನಾಂಗದ ಏಳಗೆಗೆ ಪಣತೊಟ್ಟು ನಿಂತಿದ್ದಾರೆ.. ತಾವು ಪಟ್ಟ ಕಷ್ಟಗಳು ತಮ್ಮ ಮುಂದಿನ ಪೀಳಿಗೆಗೆ ಮರುಕಳಿಸಬಾರದು ಎಂದು ಅಲೆಮಾರಿ ಜನಾಂಗದಲ್ಲಿ ಶಿಕ್ಷಣದ ಅರಿವು ಮೂಡಿಸಿದ್ದಾರೆ.. ಸಮಾಜದ ಮಕ್ಕಳು ಶಾಲೆ ಮೆಟ್ಟಿಲು ಹತ್ತುವಂತೆ ಮಾಡಿದ್ದಾರೆ.. ಅಲೆಮಾರಿ ಜನಾಂಗ ಒಂದುಕಡೆ ನೆಲೆಯೂರುವಂತೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮಾಡಿಸಿದ್ದಾರೆ.. ತಮ್ಮದೇ ಸಂಘಟನೆ ಕಟ್ಟಿ, ಆ ಮೂಲಕ ಅಲೆಮಾರಿ ಜನಾಂಗದ ಏಳಿಗೆಗೆ ಶ್ರಮಿಸುತ್ತಿದ್ದಾರೆ.. ಅಲೆಮಾರಿ ಜನಾಂಗದ ಆಶಾಕಿರಣ ರಾಮಕ್ಕನವರೇ ಇಂದಿನ ನಮ್ಮ ಬಾಹುಬಲಿ…