Wednesday, June 29, 2022

ನಮ್ಮ ಬಾಹುಬಲಿ: ಬರಗಾಲಕ್ಕೂ ಸೆಡ್ಡು ಹೊಡೆದ ಗಟ್ಟಿಗಿತ್ತಿ.. ಗ್ರಾಮೀಣ ಮಹಿಳೆಯರ ಬದುಕು ಕಟ್ಟಿದ ಛಲಗಾತಿ..!

Must read

ಹೆಸರು ರಾಜೇಶ್ವರಿ ದೇಶ್​ಮುಖ್​.. ಮೂಲತಃ ಧಾರವಾಡ ಜಿಲ್ಲೆಯ ಅಣ್ಣಿಗೇರಿಯವರು.. 2011-12ರಲ್ಲಿ ಉತ್ತರ ಕರ್ನಾಟಕ ತೀವ್ರ ಬರಗಾಲದಿಂದ ತತ್ತರಿಸಿ ಹೋಗಿದ್ದ ಸಮಯ.. ಅಲ್ಲಿಂದ ಜನರೆಲ್ಲಾ ಬೇರೆ ಬೇರೆ ಊರುಗಳಿಗೆ ವಲಸೆ ಹೋಗ್ತಿದ್ದ ಪರಿಸ್ಥಿತಿ.. ಅಂತಹ ಸಮಯದಲ್ಲಿ ಅಲ್ಲಿರುವ ಹೆಣ್ಣುಮಕ್ಕಳಿಗೆ ಉದ್ಯೋಗ ಸೃಷ್ಟಿ ಮಾಡುವ ಯೋಚನೆ ಮಾಡಿದ್ರು ರಾಜೇಶ್ವರಿ ದೇಶ್​ಮುಖ್.. ಅದಕ್ಕೆಂದೇ ಶಾವಿಗೆ ಮತ್ತು ರೊಟ್ಟಿ ತಯಾರಕ ಘಟಕವನ್ನ ಸ್ಥಾಪಿಸಿ 4 ಜನರಿಗೆ ಉದ್ಯೋಗ ಕೊಡ್ತಾರೆ.. ಅದೇ ಉದ್ಯಮ ಇಂದು 40 ಹೆಣ್ಣುಮಕ್ಕಳಿಗೆ ಉದ್ಯೋಗ ಸೃಷ್ಟಿಸಿದೆ.. ಹೆಣ್ಣುಮಕ್ಕಳು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳೋಕೆ ನೆರವಾಗಿದೆ.. ಇದರ ಜೊತೆಗೆ ತಮ್ಮ ಕೃಷಿ ಭೂಮಿಯಲ್ಲೂ ಮಹಿಳೆಯರಿಗೆ ಕೆಲಸ ಕೊಟ್ಟಿದ್ದಾರೆ.. ಮಹಿಳಾ ಸಬಲೀಕರಣಕ್ಕೆ ಕೈ ಜೋಡಿಸಿದ್ದಾರೆ.. ಗ್ರಾಮೀಣ ಭಾಗದ ಬಡ ಮಹಿಳೆಯರ ಪಾಲಿನ ಆಶಾಕಿರಣ ಎನಿಸಿಕೊಂಡಿರುವ ರಾಜೇಶ್ವರಿ ದೇಶ್​ಮುಖ್ ಅವರೇ ಇಂದಿನ ನಮ್ಮ ಬಾಹುಬಲಿ..

Latest article