Monday, November 29, 2021

ನಮ್ಮ ಬಾಹುಬಲಿ: ನ್ಯಾಚುರೋಪತಿ ಕನಸು ಕಾಣುತ್ತಿರುವ ನ್ಯಾಚುರಲ್​ ಕೃಷಿಕ.. ಅಪರೂಪದ ಸಸ್ಯಗಳ ಸಂರಕ್ಷಕ

Must read

ಹಾಸನ ಜಿಲ್ಲೆ ಶ್ರವಣ ಬೆಳಗೊಳ ಸಮೀಪದ ಬೆಕ್ಕ ಗ್ರಾಮದ ರಾಘವೇಂದ್ರ ಬೆಕ್ಕ ಅವರು ಬಿಕಾಂ ಓದಿ, ಬೆಂಗಳೂರಿನಲ್ಲಿ ಕಂಟ್ರಾಕ್ಟರ್ ಆಗಿದ್ದರು.. ಕೈ ತುಂಬ ಆದಾಯವೂ ಇತ್ತು.. ಆದ್ರೆ ಮನಸ್ಸು ಮಾತ್ರ ಕೃಷಿಯ ಕಡೆಗೆ ಸೆಳೆಯತ್ತಿತ್ತು.. ತಂದೆಯ ಕನಸು ಕೂಡ ಅದೇ ಆಗಿತ್ತು.. ಹೀಗಾಗಿ ಒಮ್ಮೆ ಧೃಡ ನಿರ್ಧಾರ ಮಾಡಿ ಕಾಂಟ್ರಾಕ್ಟರ್​ ವೃತ್ತಿಗೆ ಗುಡ್​ ಬೈ ಹೇಳಿ, ಭೂಮಿತಾಯಿಯ ಮಡಿಲು ಸೇರ್ತಾರೆ… ಕೃಷಿಯನ್ನ ಆರಂಭಿಸ್ತಾರೆ.. ಇಂಟರೆಸ್ಟಿಂಗ್​ ಏನಂದ್ರೆ, ರಾಘವೇಂದ್ರ ಬೆಕ್ಕ ಅವರ ಕೃಷಿ ಪದ್ಧತಿಯೇ ವಿಭಿನ್ನ.. ಅವರು ಹೆಚ್ಚು ಔಷಧ ಗಿಡಗಳನ್ನೇ ಬೆಳೆದರು.. ಸಮಗ್ರ ಕೃಷಿಯನ್ನ ಅಳವಡಿಸಿಕೊಂಡರು.. ಧಾರ್ಮಿಕ ವನಗಳನ್ನ ನಿರ್ಮಾಣ ಮಾಡಿದರು.. 12 ರಾಶಿಗಳು, 9 ನವಗ್ರಹಗಳು, 27 ನಕ್ಷತ್ರಗಳ ಸಸಿಗಳನ್ನ ಬೆಳೆಸಿದರು. 24 ಜೈನ ತೀರ್ಥಂಕರರ ಹೆಸರಿನಲ್ಲಿ ವನಗಳನ್ನೇ ಸೃಷ್ಟಿಸಿದರು.. ತಾವು ಬೆಳೆದ ಗಿಡಗಳನ್ನೇ ಔಷಧಿಯಾಗಿ ಬಳಸಿಕೊಂಡರು.. ಹೀಗೆ ನೈಸರ್ಗಿಕ ಕೃಷಿಯಲ್ಲಿ ವಿವಿಧ ಬೆಳೆಗಳನ್ನ ಬೆಳೆದು, ಹೆಚ್ಚಿನ ಆದಾಯವನ್ನ ಗಳಿಸುತ್ತಾರೆ.. ಅಳಿವಿನ ಅಂಚಿನಲ್ಲಿರುವ ಸಸ್ಯಗಳನ್ನ ಸಂರಕ್ಷಣೆ ಮಾಡುತ್ತಾರೆ.. ಸಾಕಷ್ಟು ಪಕ್ಷಿಗಳಿಗೆ ಇವರ ತೋಟವೇ ಆಶ್ರಯತಾಣವಾಗುತ್ತೆ.. ಇದರ ಜೊತೆಗೆ ಪ್ರಾಣಿ ಪಕ್ಷಿಗಳ ಕುಡಿಯುವ ನೀರಿಗೆಂದೇ ಬಾವಿ, ಕೆರೆಯನ್ನ ನಿರ್ಮಾಣ ಮಾಡಿದ್ದಾರೆ.. ಮನುಷ್ಯನ ಆರೋಗ್ಯ ಕಾಪಾಡಲು ಮುಂದಿನ ದಿನಗಳಲ್ಲಿ ನ್ಯಾಚುರೋಪತಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎನ್ನುವ ಕನಸನ್ನ ಹೊತ್ತಿದ್ದಾರೆ ಕೃಷಿಕ ರಾಘವೇಂದ್ರ ಬೆಕ್ಕ.. ನೈಸರ್ಗಿಕ ಕೃಷಿಯಲ್ಲಿ ನಾಡಿಗೆ ಮಾದರಿಯಾಗಿರುವ ರೈತ ರಾಘವೇಂದ್ರ ಬೆಕ್ಕ ಅವರೇ ಇಂದಿನ ನಮ್ಮ ಬಾಹುಬಲಿ..

Latest article