ಇವರು ಮೂಲತಃ ಬಳ್ಳಾರಿಯವರು.. ಕಳೆದ ಹಲವು ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಾ ಬರುತ್ತಿದ್ದಾರೆ. ಆದರೆ ಇವರು ಯೋಗ ಮಾಡುವ ವಿಧಾನ ವಿಭಿನ್ನ.. ಗಾಳಿಯಲ್ಲಿ ತೇಲುತ್ತಾ ಎತ್ತರವಾದ ಪ್ರದೇಶಗಳು, ಬಂಡೆಗಳ ಮೇಲೆ ನಿಂತು ಸರಾಗವಾಗಿ ಯೋಗಾಸನ ಮಾಡುತ್ತಾರೆ.. ಸುಮಾರು 6 ಆಸನಗಳನ್ನ ಮಾಡುವ ಮೂಲಕ ಗಿನ್ನಿಸ್ ದಾಖಲೆ ಕೂಡ ಮಾಡಿದ್ದಾರೆ.. ಅದುವೇ ರ್ಯಾಪ್ಲಿಂಗ್ ಯೋಗ.. 42ನೇ ವಯಸ್ಸಿನಲ್ಲಿ ಈ ರ್ಯಾಪ್ಲಿಂಗ್ ಯೋಗ ಮಾಡುವ ಮೂಲಕ ಜನರ ಗಮನ ಸೆಳೆದಿದ್ದಾರೆ.. ಅಷ್ಟೇ ಅಲ್ಲಾ, ಸಾಧನೆಯ ಜೊತೆಗೆ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದು, ಮಹಿಳಾ ಸಬಲೀಕರಣದತ್ತ ಕೆಲಸ ಮಾಡ್ತಿದ್ದಾರೆ.. ರ್ಯಾಪ್ಲಿಂಗ್ ಯೋಗದ ಮೂಲಕ ಜಗತ್ತಿನ ಗಮನ ಸೆಳೆದ ಯೋಗಪಟು ಪ್ರಿಯಾಕೃಷ್ಣ ಪಿಳ್ಳೈ ಅವರೇ ಇಂದಿನ ನಮ್ಮ ಬಾಹುಬಲಿ…