Monday, November 29, 2021

ನಮ್ಮ ಬಾಹುಬಲಿ: ಕಷ್ಟ ಎಂದು ಕೈಕಟ್ಟಿ ಕೂರದ ಕೃಷಿಕ.. ಸ್ವಂತ ಉದ್ಯಮ ಆರಂಭಿಸಿ ಯಶಸ್ಸು ಕಂಡ ಸಾಧಕ

Must read

ಇವರು ಮೂಲತಃ ಹುಬ್ಬಳ್ಳಿ ಸಮೀಪದ ವಿಜಾಪುರದವರು.. ಕೃಷಿ ಮೂಲ ಕಸುಬಾಗಿಲ್ಲವಾದರೂ ಬಿ.ಕಾಂ ಪದವಿ ನಂತರ ಕೃಷಿಯ ಕಡೆ ಮುಖ ಮಾಡುತ್ತಾರೆ.. ಅದರಲ್ಲೂ ಹೈನುಗಾರಿಕೆಯ ಬಗ್ಗೆ ಅಪಾರ ಆಸಕ್ತಿ.. ಕೇವಲ ಒಂದೇ ಒಂದು ಹಸು ಇಟ್ಕೊಂಡು ಹೈನುಗಾರಿಕೆ ಶುರು ಮಾಡಿದವರು ಇಂದು 45 ಹಸುಗಳನ್ನ ಸಾಕಿದ್ದಾರೆ.. ಜೊತೆಗೆ ಸಾಕಷ್ಟು ದನಕರುಗಳು, ಕುರಿಗಳು, ಹೋರಿ ಕೂಡ ಇದೆ.. ಆದ್ರೆ ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆ ಮಾಡೋಕೆ ರೈತರು ಹಿಂಜರಿತಿದ್ದಾರೆ.. ಕಾರಣ ಒಂದೇ ಮೇವಿನ ಸಮಸ್ಯೆ.. ಆ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ ಪ್ರಕಾಶ್​ ವಿಜಾಪುರ.. ಮಣ್ಣಿನ ಬಳಕೆ ಇಲ್ಲದೇ ಕೇವಲ ನೀರಿನಿಂದ ಮೇವು ತಯಾರಿಸುವ ಹೈಡ್ರೋಫೋನಿಕ್​ ಪದ್ಧತಿಯನ್ನ ಕಂಡುಕೊಂಡಿದ್ದಾರೆ. ಇದರಿಂದ ಪ್ರತಿದಿನ ಗೋವುಗಳಿಗೆ ಹಸಿರು ಮೇವು ಕೊಡಬಹುದಾಗಿದೆ.. ವಿವಿಧ ರಾಜ್ಯಗಳಿಂದ ಸಾಕಷ್ಟು ರೈತ ಅಧಿಕಾರಿಗಳು ಪ್ರಕಾಶ್​ ಅವರ ಜಮೀನಿಗೆ ಭೇಟಿ ನೀಡಿದ್ದು, ತಮ್ಮ ತಮ್ಮ ರಾಜ್ಯಗಳಲ್ಲಿ ಈ ಬಗ್ಗೆ ಅರಿವು ಮೂಡಿಸ್ತಿದ್ದಾರೆ.. ಪೌಷ್ಟಿಕ ಮೇವಿನಿಂದ, ಪೌಷ್ಟಿಕ ಹಾಲು, ಅದರಿಂದ ಉತ್ತಮ ಆದಾಯ.. ಹೀಗೆ ತಾವು ಕೊಟ್ಟಿದ್ದನ್ನ ಆದಾಯ ರೂಪದಲ್ಲಿ ಪಡೆಯತ್ತಿದ್ದಾರೆ.. ಹೈನುಗಾರಿಕೆಯಲ್ಲಿ ಯಶಸ್ಸು ಕಂಡು ತಮ್ಮದೇ ಬ್ರಾಂಡ್​ನ್ನ ಆರಂಭಿಸಿರುವ ಸಾಧಕ ಪ್ರಕಾಶ್​ ಅವರೇ ಇಂದಿನ ನಮ್ಮ ಬಾಹುಬಲಿ.

Latest article