ಹೆಸರು ಪ್ರದೀಪ್.. ಮೂಲತಃ ತುಮಕೂರಿನ ಪ್ರತಿಭೆ.. Bachelor of Computer Application ಮುಗಿಸಿ, ಎಲ್ಲರಂತೆ ಕೆಲಸ ಅರಸಿ ಬೆಂಗಳೂರಿಗೆ ಬಂದವರು.. ಆದ್ರೆ ಕೇವಲ ಒಂದೂವರೆ ವರ್ಷಕ್ಕೆ ಆ ಕೆಲಸ ಸಾಕಾಗಿ ಹೋಗುತ್ತೆ. ಸ್ವಂತ ಉದ್ಯಮ ಶುರುಮಾಡುವ ಕನಸು ಹುಟ್ಟಿಕೊಳ್ಳುತ್ತೆ.. ಆದ್ರೆ ಕೈಯ್ಯಲ್ಲಿ ಹಣ ಇರಲಿಲ್ಲ.. ಬ್ಯಾಂಕ್ನಲ್ಲಿ ಸಾಲ ಸಿಗಲಿಲ್ಲ.. ಅದೇ ಕಾರಣಕ್ಕೆ ತಾನು ಪ್ರೀತಿಸಿದ ಹುಡುಗಿಯೂ ಕೈ ಬಿಡ್ತಾಳೆ.. ಆ ಘಟನೆ ಪ್ರದೀಪ್ರಲ್ಲಿ ಸಾಧಿಸುವ ಛಲ ಹಾಗೂ ಹಠವನ್ನ ಇನ್ನಷ್ಟು ಹೆಚ್ಚು ಮಾಡುತ್ತೆ.. ಸರ್ಕಾರಿ ಕೆಲಸದ ಅವಕಾಶ ಸಿಕ್ಕರೂ ಅದನ್ನ ಬಿಟ್ಟು ಸ್ವಂತ ಉದ್ಯಮ ಶುರುಮಾಡ್ತಾರೆ.. ಮೊದಲು ಕೈ ಸುಟ್ಟಿಕೊಂಡಿದ್ದು ಇದೆ.. ನಷ್ಟ ಅನುಭವಿಸಿದ್ದು ಇದೆ.. ಲೋನ್ಗಾಗಿ ಬ್ಯಾಂಕ್ಗಳ ಮುಂದೆ ಪ್ರತಿಭಟನೆ ಮಾಡಿದ್ದು ಇದೆ.. ಆದ್ರೆ ಇದೆಲ್ಲವನ್ನ ದಾಟಿ ತೆಂಗಿನಕಾಯಿ ರಫ್ತು ಮಾಡುವ ಹೊಸ ಉದ್ಯಮ ಇವರ ಕೈ ಹಿಡಿಯುತ್ತೆ.. ಸದ್ಯ ಇಸ್ರೇಲ್ಗೆ ತುಮಕೂರಿನಿಂದ ತೆಂಗಿನಕಾಯಿ ರಫ್ತು ಮಾಡುವ ಮೂಲಕ ಕೋಟಿಗಟ್ಟಲೆ ಟರ್ನ್ಓವರ್ ಮಾಡುತ್ತಿದ್ದಾರೆ.. ಅಂದುಕೊಂಡಂತೆ ಒಂದು ಹಂತಕ್ಕೆ ಬೆಳೆದು, ಯುವ ಉದ್ಯಮಿ ಎನಿಸಿಕೊಂಡಿದ್ದಾರೆ.. ಆ ಯುವ ಉದ್ಯಮಿ ಪ್ರದೀಪ್ ಅವರೇ ಇಂದಿನ ನಮ್ಮ ಬಾಹುಬಲಿ.