ಹೆಸರು ನಜೀರ್ ಅಹ್ಮದ್ ರಸುಲಸಾಬ್ ಕೋಟೂರ್ .. ಮೂಲತಃ ಬೆಳಗಾವಿ ಜಿಲ್ಲೆ ಕಿತ್ತೂರಿನವರು.. ಕಡುಬಡತನದಲ್ಲಿ ಹುಟ್ಟಿ ಬೆಳೆದವರು. ತಂದೆ ಹೂ ಮಾರಾಟ ಮಾಡ್ತಾರೆ.. ತಾಯಿ ಟೈಲರಿಂಗ್ ವೃತ್ತಿ.. ಇಂತಹ ಬಡ ಕುಟುಂಬದಲ್ಲಿ ಜನಿಸಿದ ನಜೀರ್ ಅಹ್ಮದ್ ಅವರಿಗೆ ಭಾರತೀಯ ಸೇನೆ ಸೇರಬೇಕು, ದೇಶಸೇವೆ ಮಾಡಬೇಕು ಎನ್ನುವುದು ಬಾಲ್ಯದ ಕನಸು.. ಆದ್ರೆ ಬಡತನದಿಂದಾಗಿ ಅವರಿಗೆ ಯಾವುದೇ ತರಬೇತಿ ಪಡೆಯೋಕೆ ಸಾಧ್ಯವಾಗೋದಿಲ್ಲ.. ಆದ್ರೂ ಕನಸನ್ನ ಬೆನ್ನಟ್ಟಿದ ನಜೀರ್ ಅಹ್ಮದ್, ಸ್ವಂತ ಬಲದಿಂದ ಸೇನೆಗೆ ಆಯ್ಕೆಯಾಗ್ತಾರೆ.. ಕಳೆದ 8 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.. ಇಂಟರೆಸ್ಟಿಂಗ್ ಏನಂದ್ರೆ, ತಮ್ಮಂತೆಯೇ ಗ್ರಾಮೀಣ ಪ್ರದೇಶದ ಯುವಕರು ಸೇನೆ ಸೇರಬೇಕು ಎಂದು ಬಯಸುವ ನಜೀರ್ ಅಹ್ಮದ್, ಪ್ರತಿ ವರ್ಷ ರಜೆ ತೆಗೆದುಕೊಂಡು ಬರ್ತಾರೆ.. ಊರಿಗೆ ಬಮದಾಗ ಯುವಕರಿಗೆ ಉಚಿತವಾಗಿ ತರಬೇತಿ ನೀಡುತ್ತಾರೆ. ಇವರ ಬಳಿಯಲ್ಲಿ ತರಬೇತಿ ಪಡೆದ ಅನೇಕ ಯುವಕರು ಇಂದು ಇಂಡಿಯನ್ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.. ವರ್ಷಪೂರ್ತಿ ದೇಶ ಕಾಯುವ ನಜೀರ್ ಅಹ್ಮದ್, ರಜೆ ದಿನಗಳಲ್ಲಿ ತಮ್ಮ ಸ್ವಂತ ಆಸಕ್ತಿಯಿಂದ ಯುವ ಸೈನಿಕರನ್ನ ತಯಾರು ಮಾಡುತ್ತಿದ್ದಾರೆ.. ಜೊತೆಗೆ ಸಾಕಷ್ಟು ಸಮಾಜಸೇವೆಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.. ಧೀರ ಸೇನಾನಿ, ಭರತಮಾತೆಯ ಪುತ್ರ ನಜೀರ್ ಅಹ್ಮದ್ ಅವರೇ ಇಂದಿನ ನಮ್ಮ ಬಾಹುಬಲಿ..