Tuesday, May 17, 2022

ನಮ್ಮ ಬಾಹುಬಲಿ: ದೇಹದಾನ ಮಾಡಿ ಸಮಾಜಕ್ಕೆ ಸ್ಪೂರ್ತಿಯಾಗಿದ್ದಾರೆ ಸ್ನೇಹಿತೆಯರು

Must read

ಅವಳಿ ಸಹೋದರಿಯರಂತೆ ಕಾಣುವ ಇವರು ಕಲಬುರಗಿಯ ಪ್ರಾಣ ಸ್ನೇಹಿತೆಯರು.. ಕಾಕತಾಳೀಯವೆಂಬಂತೆ ಇಬ್ಬರ ಹೆಸರು ಕೂಡ ಮಾಲಾ.. ಚಿಕ್ಕಂದಿನಿಂದಲೂ ಸೇವಾ ಮಾನೋಭಾವನೆ ಇದ್ದ ಹೆಣ್ಣುಮಕ್ಕಳು, ಯೋಗ ಕ್ಲಾಸ್​​ನಲ್ಲಿ ಭೇಟಿಯಾಗಿ ಸ್ನೇಹಿತೆಯರಾಗ್ತಾರೆ.. ಅಲ್ಲಿ ಇಬ್ಬರ ಆಲೋಚನೆಗಳು ವಿನಿಮಯವಾಗುತ್ತೆ.. ಹೀಗಾಗಿ ಇವರಿಬ್ಬರೂ ಸಮಾಜಸೇವೆ ಮಾಡುವ ನಿರ್ಧಾರ ಮಾಡುತ್ತಾರೆ.. ನಾಲ್ಕು ಚಕ್ರ ಎನ್ನುವ ಸಂಸ್ಥೆಯೊಂದನ್ನ ಹುಟ್ಟು ಹಾಕ್ತಾರೆ.. ಆ ಮೂಲಕ ರಕ್ತದಾನ, ಬಡವರಿಗೆ-ನಿರ್ಗತಿಕರಿಗೆ ಆಹಾರ ಪೂರೈಕೆ, ಬಡ ಮಕ್ಕಳ ಶಿಕ್ಷಣಕ್ಕೆ ಧನಸಹಾಯ, ವೃದ್ದಾಶ್ರಮ-ಅನಾಥಾಶ್ರಮಗಳಿಗೆ ದಿನಸಿ ಪೂರೈಕೆಯಂತಾ ಕಾರ್ಯಗಳನ್ನ ಆರಂಭಿಸುತ್ತಾರೆ.. ಕೊರೊನಾ ಸಮಯದಲ್ಲಂತೂ ಹಗಲು ರಾತ್ರಿ ಎನ್ನದೇ, ವ್ಯಾಕ್ಸಿನೇಶನ್​ ಕ್ಯಾಂಪ್​ಗಳ ಆಯೋಚನೆ ಮಾಡುತ್ತಾರೆ. ಆಹಾರ ದಿನಸಿ ಕಿಟ್ ವಿತರಣೆ, ರೋಗಿಗಳಿಗೆ ಮೆಡಿಸನ್ ವಿತರಣೆ.. ಹೀಗೆ ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಸಮಾಜ ಸೇವೆಯಲ್ಲಿ ತಮ್ಮನ್ನ ತಾವು ತೊಗಿಸಿಕೊಳ್ಳುತ್ತಾರೆ.. ಈ ಕಿರಿಯ ವಯಸ್ಸಿನಲ್ಲೇ ತಮ್ಮನ್ನ ತಾವು ಸಮಾಜಸೇವೆಗೆ ಅರ್ಪಿಸಿಕೊಂಡು ಇತರರಿಗೆ ಮಾದರಿಯಾಗಿರುವ ಮಾಲಾದ್ವಯರೇ ಇಂದಿನ ನಮ್ಮ ಬಾಹುಬಲಿಗಳು…

Latest article