ಇವರು ಮೂಲತಃ ಹೆಚ್ಡಿ ಕೋಟೆ ತಾಲ್ಲೂಕಿನ ಮಲಾರ ಗ್ರಾಮದ ಕೃಷಿಕ.. ಸತತ 55 ವರ್ಷಗಳಿಂದ ವ್ಯವಸಾಯ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆ.. ಆ ಕಾಲದಿಂದಲೂ ಸಮಗ್ರ ಮತ್ತು ನೈಸರ್ಗಿಕ ಕೃಷಿಯನ್ನ ಅಳವಡಿಸಿಕೊಂಡಿದ್ದಾರೆ.. ಬರಗಾಲದ ಸಮಯದಲ್ಲೂ ಎದೆಗುಂದದೇ, ಸಾಕಷ್ಟು ಕಷ್ಟಗಳನ್ನ ಮೆಟ್ಟಿ ನಿಂತು, ಮಾದರಿ ಕೃಷಿಕ ಎನಿಸಿಕೊಂಡಿದ್ದಾರೆ.. 4 ಎಕರೆ ಜಾಗದಲ್ಲಿ ಶುರುಮಾಡಿ, ಇವತ್ತು 45 ಎಕರೆಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.. ಕಾಲೇಜುಗಳಿಗೆ ಭೇಟಿ ನೀಡಿ, ಕೃಷಿಯ ಬಗ್ಗೆ ಮಾಹಿತಿ ನೀಡುತ್ತಾ, ಯುವಪೀಳಿಗೆಯನ್ನ ಕೃಷಿಯ ಕಡೆ ಸೆಳೆಯುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.. 20ಕ್ಕೂ ಹೆಚ್ಚು ಜನರಿಂದ ಕೂಡಿದ ಇವರ ಅವಿಭಕ್ತ ಕುಟುಂಬ, ಕೃಷಿಯನ್ನೇ ಅವಲಂಬಿಸಿದೆ.. ಬಹಳ ಹೆಮ್ಮೆಯ ವಿಚಾರ ಏನಂದ್ರೆ, 2015ರಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಕರಾಗಿ ಪುಟ್ಟಯ್ಯನವರು ಆಯ್ಕೆಯಾಗಿದ್ದರು.. ಆ ಮೂಲಕ ದಸರಾ ಉದ್ಘಾಟಿಸಿದ ಮೊದಲ ರೈತ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು.. ಆ ಪ್ರಗತಿಪರ ರೈತ ಮಲಾರ ಪುಟ್ಟಯ್ಯನವರೇ ಇಂದಿನ ನಮ್ಮ ಬಾಹುಬಲಿ..