Wednesday, June 29, 2022

ನಮ್ಮ ಬಾಹುಬಲಿ: ಅವಮಾನ-ಅಪಮಾನಗಳನ್ನು ಎದುರಿಸಿ ಗೆದ್ದ ಒಂಟಿ ಕಾಲಿನ ರೈತ

Must read

ಹೆಸರು ಮಹೇಂದ್ರ.. ಮೂಲತಃ ಮೈಸೂರು ಜಿಲ್ಲೆಯವರು.. ಪಿಯುಸಿ ಓದುತ್ತಿದ್ದಾಗಲೇ ಬೋನ್​ ಕ್ಯಾನ್ಸರ್​ಗೆ ತುತ್ತಾಗಿ ಒಂದು ಕಾಲನ್ನ ಕಳೆದುಕೊಳ್ಳುತ್ತಾರೆ.. ಒಂದು ಕಾಲು ಕಳೆದುಕೊಂಡ್ರೂ ಮಹೇಂದ್ರ ಕೈ ಕಟ್ಟಿ ಕೂರಲಿಲ್ಲ.. ನ್ಯೂನ್ಯತೆ ದೇಹಕ್ಕಷ್ಟೇ ಮನಸ್ಸಿಗಲ್ಲ ಎಂದು ಸಾಧನೆಯತ್ತ ಮುಖ ಮಾಡ್ತಾರೆ.. ಕೃಷಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಏನಾದ್ರೂ ಸಾಧಿಸಲೇಬೇಕು ಎಂದು ಛಲ ತೊಡುತ್ತಾರೆ.. ಸಾಕಷ್ಟು ಸವಾಲುಗಳನ್ನ ಎದುರಿಸಿ ಸಮಗ್ರ ಕೃಷಿಯನ್ನ ಮಾಡಿ, ಲಾಭ ಗಳಿಸುತ್ತಾರೆ.. ಅಷ್ಟೇ ವಿಶೇಷಚೇತನರ ಕ್ರೀಡಾ ಸ್ಪರ್ಧೇಗಳಲ್ಲಿ ಭಾಗವಹಿಸಿ ಗೋಲ್ಡ್​ ಮೆಡಲ್​ ಪಡೆಯುತ್ತಾರೆ.. ಒಂಟಿ ಕಾಲಿನಲ್ಲಿ ಕೃಷಿ ಕಾಯಕಕ್ಕೆ ಇಳಿದ ರೈತ ಮಹೇಂದ್ರ ಅವರನ್ನ ನೋಡಿ ಗೇಲಿ ಮಾಡಿದವರೆಲ್ಲಾ ಇಂದು ಹೆಮ್ಮೆ ಪಡುತ್ತಿದ್ದಾರೆ.. ಎಲ್ಲಾ ಸರಿ ಇದ್ದೂ ಏನೂ ಆಗೋಲ್ಲ ಎನ್ನುವವರ ನಡುವೆ ಮನಸಿದ್ರೆ ಮಾರ್ಗ ಅನ್ನೋದನ್ನ ಸಾಧಿಸಿ ತೋರಿಸಿದ ಸಾಧಕ, ಒಂಟಿ ಕಾಲ ರೈತ ಮಹೇಂದ್ರ ಅವರೇ ಇಂದಿನ ನಮ್ಮ ಬಾಹುಬಲಿ..

Latest article