Wednesday, June 29, 2022

ನಮ್ಮ ಬಾಹುಬಲಿ: ಬದುಕನ್ನೇ ಸಮಾಜಸೇವೆಗೆ ಮುಡಿಪಿಟ್ಟ ಸೇವಕ ಲಂಕೇಶ್

Must read

ಹೆಸರು ಲಂಕೇಶ್​.. ಮೂಲತಃ ಮಂಡ್ಯ ಜಿಲ್ಲೆಯ ಪುಟ್ಟ ಗ್ರಾಮದವರು. ಜೀವನದಲ್ಲಿ ಒಂದು ಘಟನೆ ಇವರನ್ನ ರಕ್ತದಾನ ಮಾಡುವಂತೆ ಪ್ರೇರೇಪಿಸುತ್ತೆ.. ಅಲ್ಲಿಂದ ಜನರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲು ಆರಂಭಿಸುತ್ತಾರೆ.. ಮದುವೆ ದಿನವೂ ರಕ್ತದಾನ ಮಾಡಿ, ತಮ್ಮ ಮದುವೆಗೊಂದು ಅರ್ಥ ಕೊಡುತ್ತಾರೆ.. ಅಂದಿನಿಂದ ಯಾವುದೇ ಸಮಾರಂಭವಿದ್ರೂ ಅಲ್ಲಿ ರಕ್ತದಾನ ಶಿಬಿರಗಳನ್ನ ಆಯೋಜಿಸುತ್ತಾರೆ.. ಅಷ್ಟೇ ಅಲ್ಲ, ತಮ್ಮದೆ ಸಂಸ್ಥೆಯೊಂದನ್ನ ಹುಟ್ಟು ಹಾಕಿ, ಅದರ ಮೂಲಕ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನ ಮಾಡುತ್ತಿದ್ದಾರೆ.. ಉಚಿತ ಆರೋಗ್ಯ ತಪಾಸಣೆ, ಉಚಿತ ಶಸ್ತ್ರ ಚಿಕಿತ್ಸೆ, ಸ್ವಚ್ಫತಾ ಅಭಿಯಾನಗಳು, ಉದ್ಯೋಗ ಸೃಷ್ಟಿ, ಸರ್ಕಾರಿ ಶಾಲೆಗಳಿಗೆ ಪುಸ್ತಕ, ಪಿಠೋಪಕರಣ, ಸಮವಸ್ತ್ರ ವಿತರಣೆ ಹೀಗೆ ಆರೋಗ್ಯ, ಶಿಕ್ಷಣ, ಸ್ವಚ್ಫತೆ ಹಾಗೂ ಕಲಾ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಬದುಕನ್ನೇ ಸಮಾಜಸೇವೆಗೆ ಮುಡಿಪಾಗಿಟ್ಟಿರುವ ಲಂಕೇಶ್​ ಅವರೇ ಇಂದಿನ ನಮ್ಮ ಬಾಹುಬಲಿ…

Latest article