Tuesday, May 17, 2022

ನಮ್ಮ ಬಾಹುಬಲಿ: ಸಾಧನೆಗೆ ವಯಸ್ಸಿಲ್ಲ ಎನ್ನುವುದಕ್ಕೆ ಇವರೇ ಬೆಸ್ಟ್ ಎಕ್ಸಾಂಪಲ್

Must read

ಇವರು ಮೂಲತ: ಬೆಳಗಾವಿಯವರು..ವಯಸ್ಸು 42 ವರ್ಷ..ಇಬ್ಬರು ಮಕ್ಕಳ ತಾಯಿ..ಇವತ್ತು ಇವರ ಸಾಧನೆಗೆ ಇಡೀ ಬೆಳಗಾವಿಯೇ ಇವರನ್ನ  ಮೆಚ್ಚಿಕೊಂಡಾಡ್ತಿದೆ.. ಇವರು ಪ್ರತಿಯೊಬ್ಬ ಹೆಣ್ಣುಮಕ್ಕಳಿಗೆ ಸ್ಫೂರ್ತಿ. ಇಬ್ಬರೂ ಮಕ್ಕಳ ತಾಯಿ ಇಂದು ಅಂತರಾಷ್ಟ್ರೀಯ ಈಜು ಕ್ರೀಡಾ ಪಟು.. ಐದು ವರ್ಷದಲ್ಲಿ 45  ಚಿನ್ನ ಸೇರಿ 60 ಪದಕ ಗೆದ್ದ ಸಾಧಕಿ.. ಮಾನಸಿಕ ಒತ್ತಡ  ಕಡಿಮೆ ಮಾಡಿಕೊಳ್ಳಲು ಸ್ವಿಮ್ಮಿಂಗ್ ಕಲಿತ ಇವರು,ನ್ಯಾಷನಲ್​, ಇಂಟರ್​ನ್ಯಾಷನಲ್​ ಲೆವೆಲ್​ ಕಾಂಪಿಟೇಶನ್​ಗಳಲ್ಲಿ ಗೆದ್ದು ಬೀಗ್ತಿದ್ದಾರೆ..ಸರ್ಕಾರಿ ನೌಕರಿಯ ಜೊತೆಗೆ ಇಡೀ ರಾಜ್ಯ, ರಾಷ್ಟ್ರ ಹೆಮ್ಮೆಪಡುವಂತ ಸಾಧನೆ ಮಾಡ್ತಿದ್ದಾರೆ..2018 ರಲ್ಲಿ ಸ್ವೀಮ್ಮಿಂಗ್ ಕಲಿತ ಇವರು ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಈಜು ಸ್ಪರ್ಧೆಯಲ್ಲಿ ಭಾಗವಹಿ 60 ಪದಕಗಳನ್ನ ಮುಡಿಗೇರಿಸಿಕೊಂಡಿದ್ದಾರೆ.. 45 ಚಿನ್ನದ ಪದಕ, 8 ಬೆಳ್ಳಿ ಪದಕ, 7 ಕಂಚಿನ ಪದಕಗಳಿವೆ.. ಇದರಲ್ಲಿ ಇಂಟರ್ ನ್ಯಾಷನಲ್ ನಲ್ಲಿ 4 ಗೋಲ್ಡ್, 1 ಸಿಲ್ವರ್, 2 ಬ್ರೋಜ್ ಪದಕ ಗೆದ್ದಿದ್ದಾರೆ.. ನ್ಯಾಷನಲ್ ನಲ್ಲಿ 13 ಗೋಲ್ಡ್, 3 ಸಿಲ್ವರ್, 2 ಬ್ರೋಜ್ ಪದಕಗಳಿವೆ… ಒಟ್ಟಿನಲ್ಲಿ ಸಾಧನೆಗೆ ವಯಸ್ಸು ವಯಸ್ಸಿಲ್ಲ..ಮನಸ್ಸು ಮಾಡಿದ್ರೆ ಏನ್ನಾದ್ರು ಸಾಧಿಸಿ ತೋರಿಸಬಹುದು ಎನ್ನುದಕ್ಕೆ ಬೆಳಗಾವಿಯ ಈ ಅಂತರರಾಷ್ಟ್ರೀಯ ಈಜುಪಟು ಜ್ಯೋತಿ ಕೋರಿ ಸಾಕ್ಷಿಯಾಗಿದ್ದಾರೆ..

Latest article