Tuesday, August 16, 2022

ನಮ್ಮ ಬಾಹುಬಲಿ: ಗುಜರಿ ವಸ್ತುಗಳಿಂದಲೇ ಎಲೆಕ್ಟ್ರಿಕ್​ ಕಾರು ತಯಾರಿಸಿದ ತಿಪಟೂರಿನ ಜೀವನ್​

Must read

ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಪಿಯುಸಿ ಫೇಲಾದ ಹಳ್ಳಿ ಹುಡುಗನೊಬ್ಬ ಇಂದು ಹೊಸ ಆವಿಷ್ಕಾರವನ್ನೇ ಮಾಡಿದ್ದಾರೆ..ಯಾವ ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೂ ಕಡಿಮೆ ಇಲ್ಲ ಅಂತ ತೋರಿಸಿದ್ದಾನೆ ಈ ಸರ್ಕಾರಿ ಶಾಲೆಯ ಹುಡುಗ. ಕಡಿಮೆ ವೆಚ್ಚದಲ್ಲಿ, ಗುಜರಿ ವಸ್ತುಗಳು, ನಿರುಪಯುಕ್ತ ವಸ್ತುಗಳು, ಇಂಜಿನ್​ಗಳನ್ನ ಬಳಸಿಕೊಂಡು ಎಲೆಕ್ಟ್ರಿಕ್​ ಬೈಕ್ ಮತ್ತು ಜೀಪು ತಯಾರು ಮಾಡಿದ್ದಾನೆ..ಕಲ್ಪತರು ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಏರ್ಪಡಿಸಿದ್ದ 3ನೇ ಸೌತ್ ಇಂಡಿಯಾ ಪ್ರಾಜೆಕ್ಟ್ ವಸ್ತು ಪ್ರದರ್ಶನಕ್ಕೆ ಬಂದಿದ್ದ ಹಿರಿಯ ವಿಜ್ಞಾನಿಗಳು ಹಾಗೂ ಸಾರ್ವಜನಿಕರನ್ನು ನಿಬ್ಬೆರಗಾಗುವಂತೆ ಮಾಡಿದ್ದಾನೆ.. ಕೊರೊನಾ ಸಂದರ್ಭದಲ್ಲಿ ಎಲ್ಲಾ ಕೇವಲ ಯಟ್ಯೂಬ್​ ಮೂಲಕ ಎಲೆಕ್ಟಿಕಲ್ ವಾಹನಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದರ ಬಗ್ಗೆ ಹೆಚ್ಚಾಗಿ ಹುಡುಕುತ್ತಿದ್ದ.. ಕೊನೆಗೆ ನಾನು ಎಲೆಕ್ಟಿಕಲ್ ವಾಹನವನ್ನು ಸಿದ್ಧಪಡಿಸುತ್ತೇನೆಂದು ಹಠ ತೊಟ್ಟು ಸ್ಥಳೀಯವಾಗಿ ದೊರಕುವ ಲೆಡ್ ಆಸಿಡ್ ಬ್ಯಾಟರಿ ಉಪಯೋಗಿಸಿ , ಗುಜರಿ ಐಟಂ ಬಳಸಿ ಇಂದು ಜೀಪು ಮತ್ತು ಬೈಕ್​ಗಳನ್ನ ಕಡಿಮೆ ವೆಚ್ಚದಲ್ಲಿ ತಯಾರು ಮಾಡಿದ್ದಾರೆ ಜೀವನ್..

Latest article