Friday, January 21, 2022

ನಮ್ಮ ಬಾಹುಬಲಿ: ಅನಿಷ್ಟ ಪದ್ಧತಿಗಳ ವಿರುದ್ಧ ಸಮರ ಸಾರಿದ ಮೈಸೂರಿನ ಹೆಣ್ಣುಹುಲಿ ಜಶೀಲಾ

Must read

ಹೆಸರು ಜಶೀಲಾ.. ಮೈಸೂರು ಜಿಲ್ಲೆ ಹೆಚ್​ಡಿ ಕೋಟೆ ತಾಲ್ಲೂಕಿನ ದಿಟ್ಟ ಹೆಣ್ಣುಮಗಳು.. ಮದುವೆಯ ಕನಸೇ ಬೀಳದ ವಯಸ್ಸಿನಲ್ಲಿ ಬಾಲ್ಯವಿವಾಹಕ್ಕೆ ತುತ್ತಾದವರು.. ಆ ಕಾರಣಕ್ಕಾಗಿಯೇ ವಿದ್ಯಾಭ್ಯಾಸಕ್ಕೂ ಬ್ರೇಕ್​ ಬೀಳುತ್ತೆ.. ಮದುವೆ ನಂತರ ಬದುಕು ಸೊಗಸಾಗಿದ್ದಿದ್ರೆ ಇವತ್ತು ಜಶೀಲಾ ಬದುಕು ಬೇರೆಯದ್ದೇ ಆಗಿರುತ್ತಿತ್ತು.. ಆದ್ರೆ, ಬಾಲ್ಯವಿವಾಹದ ಬಳಿಕ ಅನುಭವಿಸಿದ ಕೌಟುಂಬಿಕ ದೌರ್ಜನ್ಯ ಪುಟ್ಟ ವಯಸ್ಸಿನಲ್ಲಿ ಆಕೆಯನ್ನ ಬದಲಾಗುವಂತೆ ಮಾಡುತ್ತೆ.. ಸಾಮಾಜಿಕ ಕಟ್ಟುಪಾಡುಗಳಿಂದ ಆಚೆ ಬರುವಂತೆ ಪ್ರೇರೇಪಿಸುತ್ತೆ.. ಹೀಗಾಗಿಯೇ ಅವರು ವಿದ್ಯಾಭ್ಯಾಸವನ್ನ ಮುಂದುವರೆಸುತ್ತಾರೆ.. ಮನೆಕೆಲಸ ಮಾಡಿ ಶಿಕ್ಷಣಕ್ಕೆ ಹಣವನ್ನ ಹೊಂದಿಸಿಕೊಳ್ತಾರೆ.. ಶಿಕ್ಷಣ ಪೂರೈಸುತ್ತಿದ್ದಂತೆ ಮಹಿಳಾ ಸಾಂತ್ವನ ಕೇಂದ್ರದ ಸಮಾಲೋಚಕಿಯಾಗಿ ಸೇರಿದ ಜಶೀಲಾ, ತಾವು ಎದುರಿಸಿದ ಸಮಸ್ಯೆಗಳನ್ನ, ತಮಗಾದ ನೋವನ್ನ ಬೇರೆ ಯಾವ ಹೆಣ್ಣು ಮಗಳಿಗೂ ಆಗಬಾರದು ಎಂದು ಚಿಂತಿಸುತ್ತಾರೆ.. ಅದಕ್ಕೆಂದೇ ನೊಂದ ಹೆಣ್ಣುಮಕ್ಕಳ ಪರವಾಗಿ ಹೋರಾಟಕ್ಕೆ ನಿಲ್ತಾರೆ.. ದೌರ್ಜನ್ಯದ ವಿರುದ್ಧ ದನಿ ಎತ್ತುತಾರೆ.. ಬಾಲ್ಯವಿವಾಹದಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಸಮರವನ್ನೇ ಸಾರುತ್ತಾರೆ.. ಅವರ ಈ ಹೋರಾಟದ ಬದುಕಿನಲ್ಲಿ ಅದೆಷ್ಟೋ ನೊಂದ ಹೆಣ್ಣುಮಕ್ಕಳಿಗೆ ನ್ಯಾಯ ಸಿಕ್ಕಿದೆ.. ನೆಮ್ಮದಿ ಸಿಕ್ಕಿದೆ.. ಹೆಣ್ಣುಮಕ್ಕಳ ಸಮಸ್ಯೆಗಳು ಬಗೆಹರಿದಿವೆ.. 2 ಸಾವಿರಕ್ಕೂ ಹೆಚ್ಚು ಮದುವೆಗಳನ್ನ ಮಾಡಿಸಿದ್ದಾರೆ.. ಸದಾ ಕಾಲವೂ ಅಬಲೆಯರ ಹಾಗೂ ನೊಂದ ಹೆಣ್ಣುಮಕ್ಕಳ ಪರ ಹೋರಾಟಕ್ಕೆ ಧುಮುಕುವ ಈ ಹೆಣ್ಣು ಹುಲಿ ಜಶೀಲಾ ಅವರೇ ಇಂದಿನ ನಮ್ಮ ಬಾಹುಬಲಿ..

Latest article