Thursday, January 20, 2022

ನಮ್ಮ ಬಾಹುಬಲಿ: ನಂಬಿಕೆ.. ಪ್ರಾಮಾಣಿಕತೆ.. ಪಾರದರ್ಶಕತೆಗೆ ಇನ್ನೊಂದು ಹೆಸರೇ ಗಿರಿಧರ್​ ಕಿನ್ಹಾಳ್

Must read

ಇವರು ಮೂಲತಃ ಧಾರವಾಡದವರು.. ತಂದೆ ಕೆಎಎಸ್​ ಅಧಿಕಾರಿ.. ಚಿಕ್ಕಂದಿನಿಂದಲೇ ದೇಶ ಸೇವೆ ಮಾಡೋ ಕನಸು.. ಆ ಕನಸಿಗೆ ಪೂರಕವಾಗುವಂತೆ ಯುಪಿಎಸ್​ಸಿ ಪರೀಕ್ಷೆ ಬರೆಯೋ ಇವರು ಆಯ್ಕೆ ಮಾಡಿಕೊಂಡಿದ್ದು ಇಂಡಿಯನ್​ ಫಾರೆಸ್ಟ್ ಸರ್ವೀಸ್.. ಮೊದಲ ಪ್ರಯತ್ನದಲ್ಲೇ ಪರೀಕ್ಷೆ ಪಾಸ್​ ಮಾಡಿ ಮಧ್ಯಪ್ರದೇಶಕ್ಕೆ ಪೋಸ್ಟಿಂಗ್​ ತೆಗೆದುಕೊಳ್ತಾರೆ.. ಆ ನಂತ್ರ ಬೇರೆ ಬೇರೆ ಊರುಗಳಲ್ಲಿ, ರಾಜ್ಯಗಳಲ್ಲಿ ಐಎಫ್​ಎಸ್​ ಅಧಿಕಾರಿಯಾಗಿ ಸೇವೆ ಸಲ್ಲಿಸ್ತಾರೆ.. 36 ವರ್ಷಗಳ ಇವರ ವೃತ್ತಿ ಬದುಕಿನಲ್ಲಿ ಇವರ ಸೇವೆ ಅಪಾರ.. ಅರಣ್ಯ ಉಳಿಸುವಲ್ಲಿ ಇವರ ಹೋರಾಟ ಮೆಚ್ಚುವಂತದ್ದು. ವೈಲ್ಡ್​ ಲೈಫ್, ಔಷಧಿ ಸಸ್ಯಗಳ ಸಂರಕ್ಷಣೆಗೆ ಪಣ ತೊಟ್ಟವರು.. ಇದೀಗ ನಿವೃತ್ತರಾಗಿದ್ದು, ಆನಂತರವೂ ಸುಮ್ಮನೆ ಕೂರದೇ ಕರ್ನಾಟಕ ಇತಿಹಾಸ ಸಂಶೋಧನ ಮಂಡಲದ ಚೇರ್​ಮನ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.. ಅಪ್ರತಿಮ ದೇಶಭಕ್ತ ಗಿರಿಧರ್​ ಕಿನ್ಹಾಳ್ ಅವರೇ ಇಂದಿನ ನಮ್ಮ ಬಾಹುಬಲಿ..

Latest article