Monday, November 29, 2021

ನಮ್ಮ ಬಾಹುಬಲಿ: ನಷ್ಟದಿಂದ ಭೂಮಿಯನ್ನೇ ಮಾರಲು ಮುಂದಾಗಿದ್ದ ರೈತ.. ಇಂದು ಅದೇ ಭೂಮಿಯಲ್ಲಿ ಬಂಗಾರ ಬೆಳೆದ ಅನ್ನದಾತ..

Must read

ತಲಾತಲಾಂತರದಿಂದ ಕೃಷಿಯೇ ಇವರ ಮೂಲ ಕಸುಬು.. ಆದ್ರೆ ರಾಸಾಯನಿಕ ಕೃಷಿಯಿಂದ ಭೂಮಿ ತನ್ನ ಫಲವತ್ತತೆಯನ್ನ ಕಳೆದುಕೊಂಡು, ಏನೇ ಬೆಳೆ ಬೆಳದ್ರೂ ನಷ್ಟ ಅನುಭವಿಸಬೇಕಾಗುತ್ತೆ. ಕೃಷಿಯೇ ಬೇಡ ಅಂತ ನಿರ್ಧಾರಿಸಿಬಿಡ್ತಾರೆ.. ಆದ್ರೆ ಸುಭಾಷ್​ ಪಾಳೇಕಾರ್ ಅವರ ಮಾತುಗಳು, ಇವರಿಗೆ ನೈಸರ್ಗಿಕ ಕೃಷಿಯ ಬಗ್ಗೆ ಅರಿವು ಮೂಡಿಸಿತ್ತು.. ಕೃಷಿ ಬೇಡ ಅಂದುಕೊಂಡವರು ಮತ್ತೆ ಭೂಮಿ ತಾಯಿಯ ಸೇವೆ ಮಾಡಲು ನಿರ್ಧರಿಸುತ್ತಾರೆ.. ಝಿರೋ ಇನ್​​ವೆಸ್ಟ್​ಮೆಂಟ್​ನಿಂದ ಲಕ್ಷಗಟ್ಟಲೆ ಆದಾಯ ತೆಗೆಯುತ್ತಾರೆ.. ನೈಸರ್ಗಿಕ ಸಮಗ್ರ ಕೃಷಿಯ ಮೂಲಕ ಇಡೀ ಜಿಲ್ಲೆಗೆ ಹೆಸರುವಾಸಿಯಾಗ್ತಾರೆ.. ದೇಶ-ವಿದೇಶಗಳಿಂದ ರೈತ ಪ್ರತಿನಿಧಿಗಳು ಇವರ ತೋಟಕ್ಕೆ ಭೇಟಿ ನೀಡಿ, ಇವರ ಕೃಷಿ ಸಾಧನೆಗೆ ಶಹಬ್ಬಾಸ್ ಹೇಳುತ್ತಾರೆ.. ಆ ಮೂಲಕ ನಂಜನಗೂಡು ಬಳಿಯ ಹೊಸಕೋಟೆಯ ಸಿದ್ದಪ್ಪನವರು ಇಂದು ಪ್ರಗತಿಪರ ರೈತ ಎಂದು ಕರೆಸಿಕೊಳ್ಳುತ್ತಿದ್ದಾರೆ.. ಆ ಮಣ್ಣಿನ ಮಗ ಸಿದ್ದಪ್ಪನವರೇ ಇಂದಿನ ನಮ್ಮ ಬಾಹುಬಲಿ..

Latest article