Monday, November 29, 2021

ನಮ್ಮ ಬಾಹುಬಲಿ: ಪುಟ್ಟ ಹಳ್ಳಿಯ ಫಾರ್ಮರ್​.. ಇಂದು ಇಂಟರ್​ನ್ಯಾಷನಲ್​ ಎಜುಕೇಟೆಡ್​ ಕೃಷಿಕ

Must read

ಐಟಿಐ ಓದಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶಂಕರ್​ ಎಂಬ ಈ ಯುವಕ ಇದೀಗ ಹಾವೇರಿ ಜಿಲ್ಲೆಯಲ್ಲಿ ಮಾದರಿ ರೈತ ಎನಿಸಿಕೊಂಡಿದ್ದಾರೆ.. ಕೆಲಸ ಬಿಟ್ಟು ಕೃಷಿಯತ್ತ ಮುಖ ಮಾಡಿದ ಶಂಕರ್​, ತಮಗಿದ್ದ ಕೇವಲ 1 ಎಕರೆ 29 ಗುಂಟೆ ಜಾಗದಲ್ಲಿ ಬಂಗಾರದ ಬೆಳೆಯನ್ನೇ ತೆಗೆಯುತ್ತಿದ್ದಾರೆ.. ಕಡಿಮೆ ಭೂಮಿಯಲ್ಲಿ ಭಿನ್ನ ವಿಭಿನ್ನ ಬೆಳೆಗಳನ್ನ ಬೆಳೆಯುತ್ತಿದ್ದಾರೆ.. ಎಲ್ಲರೂ ಎಕರೆಗಟ್ಟಲೆ ಲೆಕ್ಕದಲ್ಲಿ ವ್ಯವಸಾಯ ಮಾಡಿದ್ರೆ, ಇವರು ಅಡಿ ಲೆಕ್ಕದಲ್ಲಿ ಕೃಷಿ ಮಾಡ್ತಾರೆ.. ಶಂಕರ್ ಅವರ ಯಶಸ್ಸು ಇರುವುದೇ ಇಲ್ಲಿ.. ವ್ಯವಸಾಯ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯತ್ನಗಳನ್ನ ಮಾಡಿ ಗೆದ್ದಿದ್ದಾರೆ.. ಮೊಟ್ಟ ಮೊದಲ ಬಾರಿಗೆ ಸೂಕ್ಷ್ಮ ಹನಿ ನೀರಾವರಿ ಪದ್ಧತಿಯ ಮೂಲಕ ಭತ್ತವನ್ನ ಬೆಳೆದು ತೋರಿಸಿದ್ದಾರೆ.. ನೀರು ಬಾರದ ಬೋರ್​ವೆಲ್​ಗಳಲ್ಲಿ ಅಂತರ್ಜಲ ವೃದ್ಧಿ ಮಾಡುವ ಹೊಸ ವಿಧಾನ ಕಂಡುಕೊಂಡಿದ್ದಾರೆ.. ತಮ್ಮಲ್ಲಿರುವ ಮಾಹಿತಿಯ ಮೂಲಕ ಬೇರೆ ರೈತರಿಗೆ ಅರಿವು ಮೂಡಿಸ್ತಿದ್ದು, ಅವರ ಬೆಳವಣಿಗೆಗೆ ಸಹಕಾರಿಯಾಗಿದ್ದಾರೆ.. ತೆರೆಮರೆಯಲ್ಲೇ ಕೃಷಿಯಲ್ಲಿ ಸಾಧನೆ ಮಾಡಿದ ಶಂಕರ್​ ಅವರೇ ಇಂದಿನ ನಮ್ಮ ಬಾಹುಬಲಿ..

Latest article