Monday, November 29, 2021

ನಮ್ಮ ಬಾಹುಬಲಿ: ಸರ್ಕಾರಿ ಕೆಲಸಕ್ಕೆ ಗುಡ್​ ಬೈ ಹೇಳಿ ಭೂಮಿತಾಯಿಯ ಸೇವೆಗೆ ಜೈ ಎಂದ ಪ್ರಗತಿಪರ ರೈತ

Must read

ಹೆಸರು ನಾಗರಾಜ ಶೆಟ್ಟಿ.. ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿಪರ ರೈತ. ಚಿಕ್ಕಂದಿನಲ್ಲೇ ತಾಯಿ ಕಳೆದುಕೊಂಡ ಇವರು ಕೃಷಿಯನ್ನೇ ತಾಯಿ ಎಂದು ಆರಾಧಿಸಿದವರು. ಸರ್ಕಾರಿ ಹುದ್ದೆಗೆ ಸೇರಬೇಕು ಅನ್ನೋ ಕನಸನ್ನ ಹೊತ್ತು ಸರ್ಕಾರಿ ಹುದ್ದೆಯ ಅಪಾಂಯ್ಟ್ ಮೆಂಟ್​ ಲೆಟರ್ ಕೈ ಸೇರಿದ್ದೇ ತಡ ತಮ್ಮ ನಿರ್ಧಾರವನ್ನೇ ಬದಲಿಸಿ, ಮತ್ತೆ ಭೂಮಿತಾಯಿಯ ಮಡಿಲಲ್ಲೇ ಬದುಕು ಕಟ್ಟಿಕೊಳ್ಳುವ ಯೋಚನೆ ಮಾಡಿದ್ರು.. ಕೃಷಿಯಲ್ಲೇ ದುಡಿಮೆ ಮಾಡಿ ಬೆನ್ನಿಗೆ ಬಿದ್ದ ಅಕ್ಕ-ತಮ್ಮ-ತಂಗಿಗೂ ಬದುಕು ಕಟ್ಟಿಕೊಟ್ಟರು.. ಇಂದಿಗೆ ತಮ್ಮದೇ ಜಾಗದಲ್ಲಿ ಬಂಗಾರದಂತಹ ಬೆಳೆ ಬೆಳಿತಿದ್ದಾರೆ. ಬೇರೆ ಬೇರೆ ರಾಜ್ಯಗಳಿಗೆ ಎಕ್ಸ್​ಪೋರ್ಟ್​ ಮಾಡ್ತಿದ್ದಾರೆ.. ತಮ್ಮ ಜಮೀನಿಗೆ ಬೇಕಾದ ಗೊಬ್ಬರವನ್ನ ತಾವೇ ತಯಾರು ಮಾಡ್ತಾರೆ.. ಕೃಷಿಯ ಜೊತೆ ಹೈನುಗಾರಿಕೆ ಆರಂಭಿಸಿ, ತಿಂಗಳು, ವರ್ಷದ ಆದಾಯ ಮಾತ್ರವಲ್ಲದೆ, ಪ್ರತಿದಿನದಆದಾಯ ನೋಡುವಂತಾಗಿದೆ. ಜಿಲ್ಲಾ ಮಟ್ಟದಲ್ಲಿ ಕೃಷಿಕ ಶ್ರೇಷ್ಟ ಪ್ರಶಸ್ತಿ ಪಡೆದು, ಇಡೀ ಜಿಲ್ಲೆಗೆ ಮಾದರಿಯಾಗಿದ್ದಾರೆ.. ದಕ್ಷಿಣ ಕನ್ನಡದ ಈ ಮಾದರಿ ರೈತ ನಾಗರಾಜ ಶೆಟ್ಟಿಯವರೇ ಇಂದಿನ ನಮ್ಮ ಬಾಹುಬಲಿ..

Latest article