Monday, November 29, 2021

ನಮ್ಮ ಬಾಹುಬಲಿ: ನೀರಿಲ್ಲದ ಊರಲ್ಲಿ ಹಸಿರು ಕ್ರಾಂತಿ ಮಾಡಿದ ಕೆಎಸ್​ಆರ್​ಟಿಸಿ ಕಂಡಕ್ಟರ್

Must read

ಇವರು ಮೂಲತ: ಬ್ರಾಹ್ಮಣ ಕುಟುಂಬದವರು..ತಂದೆ ಪೌರೋಹಿತ್ಯ ಕಾಯಕ ಮಾಡ್ತಿದ್ದವರು..ಕೃಷಿ ಮೂಲ ಕಸುಬಾಗಿಲ್ಲವಾದರೂ ಮಂಜುನಾಥ್​ ಅವರಿಗೆ ಕೃಷಿಯ ಬಗ್ಗೆ ಎಲ್ಲಿಲ್ಲದ ಆಸಕ್ತಿ..ಕೆಎಸ್​ಆರ್​ಟಿಸಿ ಕಂಡಕ್ಟರ್ ಆಗಿ ಸರ್ಕಾರಿ ಸೇವೆ ಮಾಡ್ತಾ, ಕೈ ತುಂಬ ಸಂಬಳ ಪಡೀತಿದ್ದ ಇವರು, ಕೇವಲ 4 ವರ್ಷಕ್ಕೆ ರಾಜೀನಾಮೆ ಕೊಟ್ಟು ಭೂಮಿ ತಾಯಿಯ ಸೇವೆ ಮಾಡಲು ನಿರ್ಧಾರ ಮಾಡ್ತಾರೆ..ಅರಸೀಕೆರೆಯ ನೀರಿನ ಸೌಲಭ್ಯವೇ ಇಲ್ಲದ ಊರಲ್ಲಿ ಮಲೆನಾಡಿನ ಹಸಿರು ಕಂಗೊಳಿಸುವಂತೆ ಮಾಡ್ತಾರೆ..ಆ ಊರಿನ ಜನಕ್ಕೆ ಗೊತ್ತೇಯಿರದ ಡ್ರಾಗನ್​ ಫ್ರೂಟ್, ಜಾಯ್​ಕಾಯ್​ ಹೀಗೆ ಹೊಸ ಹೊಸ ಬೆಳೆಗಳನ್ನ ಬೆಳೆದು ಯಶಸ್ಸನ್ನ ಕಾಣ್ತಾರೆ..ದೇಶದ ವಿವಿಧ ರಾಜ್ಯಗಳು ಮತ್ತು ಚೈನಾ ಕೃಷಿ ಪ್ರವಾಸಕ್ಕೆ ಭೇಟಿ ಕೊಟ್ಟು, ಕೃಷಿಯ ಬಗ್ಗೆ ಹೆಚ್ಚಿನ ವಿಚಾರಗಳನ್ನ ಗ್ರಹಿಸಿಕೊಳ್ತಾರೆ..ಸರ್ಕಾರಿ ಕೆಲಸ ಬಿಟ್ಟು ಊರಿಗೆ ಬಂದಾಗ ಆಡಿಕೊಂಡ ಜನರೆದುರು ಇಂದು ಯಶಸ್ವಿ ಕೃಷಿಕ ಅನ್ನಿಸಿಕೊಂಡಿದ್ದು, ಕರ್ನಾಟಕ ಸರ್ಕಾರದಿಂದಲೇ ಸಾಕಷ್ಟು ಪ್ರಶಸ್ತಿಗಳನ್ನ ಪಡೆದುಕೊಂಡಿದ್ದಾರೆ.

Latest article