ರವಿಕುಮಾರ್ ಆನಂದಯ್ಯ ವೀರಕ್ತಮಠ..ಮೂಲತ: ಹುಬ್ಬಳ್ಳಿಯ ತಾರಿಹಾಳ ಗ್ರಾಮದ ನಿವಾಸಿ. ಓದಿದ್ದು ಬಿಇ ಮೆಕ್ಯಾನಿಕಲ್, ನಿಂತಿದ್ದು ರೈತರ ಬೆನ್ನಿಗೆ. ಸಾಕಷ್ಟು ಖಾಸಗಿ ಕಂಪೆನಿಗಳಲ್ಲಿ ಉದ್ಯೋಗವಾಕಾಶ ಸಿಕ್ಕರೂ, ಅದೆಲ್ಲವನ್ನು ಬಿಟ್ಟು ತನ್ನೂರಿನ ರೈತರಿಗೆ ಸೇವೆ ಮಾಡಬೇಕು ಅನ್ನೋ ಯೋಚನೆ ಇವರಾದ್ದಾಗಿತ್ತು..ರೈತರಿಗೆ ಅನುಕೂಲವಾಗುವಂತೆ ಯಂತ್ರಗಳ ಆವಿಷ್ಕಾರ ಮಾಡೊಕ್ಕೆ ಶುರುಮಾಡಿದ್ರು..ಕೃಷಿ ಯಂತ್ರಗಳನ್ನ ಕಂಡುಹಿಡಿದ್ರು..ಟ್ರಾಕ್ಟರ್ಗಳಿಗೆ ಟೈರ್ ಬದಲಾಗಿ ಐರನ್ ವೀಲ್ಸ್ ಸಿದ್ದಪಡಿಸಿದ್ರು..ಔಷಧೀ ಸಿಂಪಡಣೆಗಾಗಿ ಹ್ಯಾಂಡ್ ಪಂಪ್ ಬದಲಾಗಿ ಬೂಮ್ ಸ್ಪ್ರೇ ಕಂಡುಹಿಡಿದ್ರು..ಟ್ರ್ಯಾಕ್ಟರ್ರ್ಗಳಿಗೆ ಕಳೆ ಕೀಳುವ ಯಂತ್ರವನ್ನ ಜೋಡಿಸಿದ್ರು..ಹೀಗೆ ರೈತರಿಗೆ ಬೆಳೆ ನಾಶವಾಗದೆ ಕಡಿಮೆ ಸಮಯದಲ್ಲಿ, ಕಡಿಮೆ ವೆಚ್ಚದಲ್ಲಿ ಕೃಷಿ ಕೆಲಸಗಳನ್ನ ಮಾಡಿಕೊಳ್ಳುವಂತೆ ಅನುಕೂಲ ಮಾಡಿಕೊಟ್ಟಿದ್ದಾರೆ..