ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಮೂಲದ ಕೆಂಪಯ್ಯನ ಬಾವಿಯ ರವೀಶ್ ವೃತ್ತಿಯಲ್ಲಿ ಪೊಲೀಸ್ ಅಧಿಕಾರಿ…ಪ್ರವೃತ್ತಿಯಲ್ಲಿ ಕೃಷಿಕ..ಚಿಕ್ಕಂದಿನಿಂದಲೂ ಕೃಷಿಯಲ್ಲಿ ಹೆಚ್ಚು ಆಸಕ್ತಿ.. ವಿದ್ಯಾಭ್ಯಾಸದ ನಂತರ ಪೊಲೀಸ್ ಡಿರ್ಪಾಟ್ಮೆಂಟ್ ಸೇರಿದ್ರೂ ಕೂಡ ವ್ಯವಸಾಯ ಮಾಡಬೇಕು ಅನ್ನೋ ಹಂಬಲ ಸದಾ ಇತ್ತು..ಒಂದಷ್ಟು ಟೀಕೆಗಳ ನಡುವೆಯೇ, ಬಿಡುವಿನ ಸಮಯದಲ್ಲಿ ಕೃಷಿಯ ಬಗ್ಗೆ ಗಮನ ಹರಿಸಿದ್ರು..ಇದೀಗ ಸಮಗ್ರ ಕೃಷಿಯ ಮೂಲಕ ಚಿಕ್ಕನಾಯಕನ ಹಳ್ಳಿಗೆ ಮಾದರಿ ರೈತ ಅನ್ನಿಸಿಕೊಂಡಿದ್ದಾರೆ..ಬಂಗಾರದ ಮನುಷ್ಯ ಸಿನಿಮಾವನ್ನ 50 ಕ್ಕೂ ಹೆಚ್ಚು ಬಾರಿ ನೋಡಿ, ಅದರಿಂದ ಪ್ರಭಾವಿತರಾಗಿದ್ದಾರೆ..ಪೊಲೀಸ್ ಅಧಿಕಾರಿಯೊಬ್ಬರು ಛಲದಿಂದ ಬರಡು ಭೂಮಿಯಲ್ಲಿ ಚಿನ್ನದ ಬೆಳೆ ತೆಗೆಯುತ್ತಿದ್ದಾರೆ.. ತಮಗಿದ್ದ 5 ಎಕರೆ ಜಾಗ ದಲ್ಲಿ ಅಡಿಕೆ, ಪಪ್ಪಾಯಿ ಗಿಡ, ನುಗ್ಗೆ ಗೀಡ, ಬಾಳೆ, ಕಲ್ಲಂಗಡಿ ,ಸೀಬೆಗಿಡ, ಗಜ ನಿಂಬೆ ಹಾಗೂ ತರಕಾರಿ, ಸೋಪ್ಪು, ಹೀಗೆ ನಾನಾತರದ ಗಿಡಗಳನ್ನ ಬೆಳೆದಿದ್ದಾರೆ.. ಈ ಮೂಲಕ ಪೊಲೀಸ್ ಕೆಲಸದ ಜೊತೆಗೆ ಕೃಷಿಕನಾಗಿಯೂ ಗುರುತಿಸಿಕೊಂಡಿದ್ದಾರೆ.