ಇವರು ಶಿವಮೊಗ್ಗದ ತೀರ್ಥಹಳ್ಳಿ ಮೂಲದವರು.. ತಂದೆ ತಾಯಿ ದಿನಗೂಲಿ ಕೃಷಿಕರು. ಕಷ್ಟಪಟ್ಟು ಮಗನನ್ನು ಓದಿಸ್ತಾರೆ.. ತಂದೆ ತಾಯಿ ಕಷ್ಟ ನೋಡಿ, ಛಲದಿಂದ ಓದಿ ಮುಂದೊಂದು ದಿನ ಡಾಕ್ಟರ್ ಆಗ್ತಾರೆ.. ಫೀಸ್ ಕಟ್ಟೋಕ್ಕೆ ದುಡ್ಡಿಲ್ಲದೆ, ಪುಸ್ತಕ ಕೊಂಡುಕೊಳ್ಳೋಕ್ಕೆ ಆಗದೇ, ಒಂದಷ್ಟು ಚಾಲೆಂಜಸ್ ಫೇಸ್ ಮಾಡಿದ್ರು, ಛಲ ಬಿಡದೇ ಓದು ಮುಂದುವರೆಸ್ತಾರೆ.. ಸಂಪೂರ್ಣ ಸರ್ಕಾರಿ ಶಾಲಾ-ಕಾಲೇಜಿನಲ್ಲೇ ಓದಿ, ಸಿಇಟಿ ಎಕ್ಸಾಂನಲ್ಲಿ ರ್ಯಾಕಿಂಗ್ ಪಡೀತಾರೆ.. ಡಾಕ್ಟರ್ ಆಗಿ ಕೊರೊನಾ ಸಮಯದಲ್ಲಿ, ಪ್ರವಾಹದ ಸಮಯದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜನರ ಸೇವೆ ಮಾಡ್ತಾರೆ.. ಅಷ್ಟೇ ಅಲ್ಲಾ, ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.. ಎಲ್ಲದಕ್ಕಿಂತ ಹೆಚ್ಚಾಗಿ ತನ್ನೂರಿನ ಜನರಿಗೆ ವೈದ್ಯಕೀಯ ಸೌಲಭ್ಯಗಳನ್ನ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡ್ತಿದ್ದಾರೆ.. ಅವರೇ ಡಾಕ್ಟರ್ ಪ್ರೇಮ್.. ಇಂದಿನ ನಮ್ಮ ಬಾಹುಬಲಿ.