Monday, January 30, 2023

ನಮ್ಮ ಬಾಹುಬಲಿ: ಮಾಸ್​​ ಡೈಲಾಗ್ಸ್​ ಹಿಂದಿನ ರಿಯಲ್​ ಹೀರೋ.. ಚಿತ್ರರಂಗದ ಆಸ್ತಿ ಸಂಭಾಷಣೆಕಾರ ಮಾಸ್ತಿ

Must read

ಇವರು ಮೂಲತಃ ಕೋಲಾರ ಜಿಲ್ಲೆಯವರು.. ಮಧ್ಯಮ ವರ್ಗದ ಕುಟುಂಬ.. ತಮಗೆ ಗೊತ್ತಿಲ್ಲದೆ ತಮ್ಮೊಳಗೆ ಸಿನಿಮಾ ಪ್ರೀತಿ ಬೆಳೆಸಿಕೊಂಡವರು.. ಎಲ್​ಎಲ್​ಬಿ ಮಾಡೋಕ್ಕೆ ಬೆಂಗಳೂರಿಗೆ ಬಂದವರು, ನೆಲೆಯೂರಿದ್ದು ಮಾತ್ರ ಗಾಂಧೀನಗರದಲ್ಲಿ.. ಐದಾರು ವರ್ಷ ಅಲೆದಾಡಿ ಸಿನಿಮಾರಂಗದ ನಂಟು ಬೆಳೆಸಿಕೊಂಡವರು. ಆದರೆ ಬೆಳೆದಿದ್ದು ಮಾತ್ರ ಸ್ವಂತ ಪ್ರತಿಭೆ ಮತ್ತು ಪರಿಶ್ರಮದಿಂದ.. ಸಾಕಷ್ಟು ಅಲೆದಾಟ, ಅವಮಾನ-ಸವಾಲುಗಳ ನಡುವೆ ಚಿತ್ರರಂಗದಲ್ಲಿ ಗುರುತಿಸಿಕೊಂಡವರು.. ಏನೇ ಸವಾಲುಗಳು ಎದುರಾದ್ರೂ ಬರವಣಿಗೆ ಮಾತ್ರ ಕೈ ಬಿಡಲಿಲ್ಲ.. ಬಾಲ್​ಪೆನ್​ ಸಿನಿಮಾ ಮೂಲಕ ಕಥೆಗಾರರಾದ ಇವರು, ಕಡ್ಡಿಪುಡಿ ಮೂಲಕ ಸಂಭಾಷಣೆಗಾರರಾಗಿ ಗುರುತಿಸಿಕೊಂಡ್ರು. ಅಲ್ಲಿಂದ ಡೈಲಾಗ್​ ರೈಟರ್ ಆಗಿ ಸಾಲು ಸಾಲು ಸಿನಿಮಾಗಳಲ್ಲಿ ಕೆಲಸ ಮಾಡಿದ್ರು.. ಇಂದು ಮಾಸ್​ ಡೈಲಾಗ್ಸ್​ ಅಂದ್ರೆ ಮಾಸ್ತಿ ಅಂತಿದ್ದಾರೆ ಸಿನಿಪ್ರಿಯರು.. ಕನ್ನಡ ಚಿತ್ರರಂಗದ ಬೇಡಿಕೆಯ ಸಂಭಾಷಣೆಗಾರರಾಗಿ ಬೆಳೆದು ನಿಂತಿದ್ದಾರೆ..

Latest article