Wednesday, June 29, 2022

ನಮ್ಮ ಬಾಹುಬಲಿ: ಅಪಮಾನ ಮಾಡಿದವರಿಗೆಲ್ಲಾ ಅಧ್ಯಾಯವಾದ ಸಾಧಕಿ..ದೇವಕಿ ಯೋಗಾನಂದ್

Must read

ಹೆಸರು ದೇವಕಿ ಯೋಗಾನಂದ್​.. ಮೂಲತಃ ಹುಬ್ಬಳಿಯ, ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವರು.. ಚಿಕ್ಕಂದಿನಿಂದಲೂ ಜೀವನದಲ್ಲಿ ಏನಾದ್ರೂ ಸಾಧಿಸಬೇಕು ಎನ್ನುವ ಹಂಬಲ.. ಇಂಜಿನಿಯರಿಂಗ್​ ಪದವಿ ಮುಗಿಸಿ, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿ, ನಂತರ ತಮ್ಮದೇ ಸ್ವಂತ ಡಿಟಿಪಿ ಸೆಂಟರ್​ ಆರಂಭಿಸುತ್ತಾರೆ.. ಅಲ್ಲಿಂದ ದೇವಕಿಯವರ ಬದುಕೇ ಬದಲಾಗುತ್ತೆ.. ಅಲ್ಲಿಂದ ಅವರು ಇತರೆ ಹೆಣ್ಣುಮಕ್ಕಳ ನೆರವಿಗೆ ನಿಲ್ತಾರೆ.. ಗ್ರಾಮೀಣ ಭಾಗದ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಪಣ ತೊಡ್ತಾರೆ.. ಉಚಿತ ಟೈಲರಿಂಗ್, ಫ್ಯಾಶನ್ ಡಿಸೈನಿಂಗ್, ಬ್ಯೂಟಪ ಪಾರ್ಲರ್ ತರಬೇತಿ ಕೊಡ್ತಾರೆ.. ಬೆಂಗಳೂರಿನಲ್ಲಿ ಉದ್ಯೋಗಾವಕಾಶ ಕೊಡಿಸುತ್ತಾರೆ.. ಅದಕ್ಕಿಂತ ಹೆಚ್ಚಾಗಿ ಹುಬ್ಬಳಿಯಲ್ಲೇ ಗಾರ್ಮೆಂಟ್​ ಶುರುಮಾಡಿ 350 ಹೆಣ್ಣುಮಕ್ಕಳಿಗೆ ಉದ್ಯೋಗ ಕಲ್ಪಿಸುತ್ತಾರೆ.. ರೇಷ್ಮೆ ಉದ್ಯಮ ಸ್ಥಾಪಿಸಿ ರೈತರಿಗೆ ನೆರವಾಗುತ್ತಿದ್ದಾರೆ.. ಒಂದು ಕಾಲಕ್ಕೆ 300 ರೂಪಾಯಿ ವೇತನ ಪಡೆಯುತ್ತಿದ್ದ ದೇವಕಿಯವರು ಇಂದು 350ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡುವ ಮೂಲಕ ದಾರಿ ದೀಪ ಎನಿಸಿಕೊಂಡಿದ್ದಾರೆ.. ಸಾಧಕಿ ದೇವಕಿಯವರೇ ಇಂದಿನ ನಮ್ಮ ಬಾಹುಬಲಿ…

Latest article