Sunday, October 2, 2022

ನಮ್ಮ ಬಾಹುಬಲಿ: ಕಾರ್ಗಿಲ್​ ಯುದ್ಧದಲ್ಲಿ ಭಾಗವಹಿಸಿದ ವೀರ ಚಂದ್ರಶೇಖರಯ್ಯ ಸವಡಿ

Must read

ಇವರು ಸುಬೇದಾರ ಚಂದ್ರಶೇಖರಯ್ಯ ಸವಡಿ..ಮೂಲತ:ಬೆಳಗಾವಿಯವರು. ಚಿಕ್ಕವಯಸ್ಸಿನಿಂದಲೇ ಸೇವಾ ಮನೋಭಾವನೆ ಬೆಳೆಸಿಕೊಂಡಿರೋ ಇವರು, ಪಿಯುಸಿ ಓದುತ್ತಿರುವಾಗಲೇ ಸೇನೆಗೆ ಆಯ್ಕೆಯಾಗ್ತಾರೆ..19 ವರ್ಷಗಳ ಕಾಲ ದೇಶ ಸೇವೆ ಮಾಡ್ತಾರೆ..19 ವರ್ಷಗಳ ಜರ್ನಿಯಲ್ಲಿ ಸಾಕಷ್ಟು ಪ್ರಮುಖ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ..ಕಾರ್ಗಿಲ್​ ಯುದ್ಧ, ಇಂದಿರಾಗಾಂಧಿ ನಾಯಕತ್ವದಲ್ಲಿ ಗೋಲ್ಡನ್ ಟೆಂಪಲ್​ ಕಾರ್ಯಾಚರಣೆ, ರಾಜೀವ್​ ಗಾಂಧಿ ನೇತೃತ್ವದಲ್ಲಿ ಭಾರತ-ಶ್ರೀಲಂಕಾ ಶಾಂತಿ ಸೇನಾ ಪಡೆಯಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ..ಇದೀಗ 61 ನೇ ವಯಸ್ಸಿನಲ್ಲಿಯೂ ಸಮಾಜಸೇವೆಗಾಗಿ ತಮ್ಮನ್ನ ತಾವು ಮುಡಿಪಾಗಿಟ್ಟಿದ್ದಾರೆ..ರಸ್ತೆಯಲ್ಲಿ ಯಾವುದೇ ಅಪಘಾತವಾದರೂ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವುದು, ಕೋವಿಡ್​ ಸಮಯದಲ್ಲಿ ಅನಾಥಶವಗಳ ಅಂತ್ಯಸಂಸ್ಕಾರ ಹೀಗೆ ಬೆಳಗಾವಿ ಜನರ ಕಷ್ಟಕ್ಕೆ ಸ್ಪಂದಿಸ್ತಿದ್ದಾರೆ.

Latest article