Tuesday, October 26, 2021

ನಮ್ಮ ಬಾಹುಬಲಿ: ಸಾಹಿತಿ, ಕಥೆಗಾರ, ಅಂಕಣಕಾರ ಬನ್ನೂರು ಕೆ. ರಾಜು

Must read

ಇವರು ಬನ್ನೂರು ರಾಜು ಅಂತಲೇ ಹೆಸರುವಾಸಿ.. ಮೂಲತಃ ರೈತಾಪಿ ಕುಟುಂಬದವರು.. ಆದ್ರೆ ಇವರೊಬ್ಬ ಕವಿ, ಸಾಹಿತಿ, ವಿಮರ್ಶಕರು, ನಾಟಕಕಾರರು ಹಾಗೂ ಅಂಕಣಕಾರರು.. 7ನೇ ತರಗತಿ ಓದುತ್ತಿರುವಾಗಲೇ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡವರು.. ಕಾಲೇಜು ದಿನಗಳಲ್ಲೇ ಪತ್ರಿಕೆ ಆರಂಭಿಸಿದವರು.. ಅಂಬರೀಶ್​ ಅವರಿಗೆ ಬಹಳ ಆಪ್ತರು.. ಅಂಬರೀಶ್, ಅಣ್ಣಾವ್ರ ಹೆಸರಿನಲ್ಲಿ ಅದ್ಬುತ ಪುಸ್ತಕಗಳನ್ನ ಹೊರತಂದಿದ್ದಾರೆ.. ಸಿನಿಮಾರಂಗದ ನಂಟು, ರಾಜಕೀಯ ನಂಟು ಇದ್ದರೂ, ಅದ್ಯಾವುದರ ಉಪಯೋಗ ಪಡೆದುಕೊಳ್ಳದೇ, ಕೇವಲ ಸಾಹಿತ್ಯ, ಬರವಣಿಗೆಯ ಮೂಲಕವೇ ಬದುಕು ಕಟ್ಟಿಕೊಂಡವರು.. ಅದೇ ದುಡಿಮೆ, ಅದೇ ಜೀವನ.. ಈವರೆಗೆ 5 ಸಾವಿರಕ್ಕೂ ಹೆಚ್ಚು ಲೇಖನಗಳನ್ನ ಬರೆದಿದ್ದಾರೆ.. ಕನ್ನಡದ ಎಲ್ಲಾ ದಿನಪತ್ರಿಕೆಗಳಲ್ಲೂ ಇವರ ಅಂಕಣಕ್ಕೆ ಒಂದು ಜಾಗ ಮೀಸಲಿರುತ್ತದೆ.. ಸಾಹಿತ್ಯ ಲೋಕಕ್ಕೆ ಇವರ ಕೊಡುಗೆ ಅಪಾರ.. ಎಲೆಮರೆಕಾಯಾಗಿ ಸಾಹಿತ್ಯ ಕೃಷಿ ಮಾಡುತ್ತಿರುವ ಬನ್ನೂರು ಕೆ. ರಾಜು ಅವರೇ ಇಂದಿನ ನಮ್ಮ ಬಾಹುಬಲಿ..

More articles

Latest article